ಶುಕ್ರವಾರ, ಜೂಲೈ 3, 2020
22 °C

ವಿಜಯಪುರ: ಆರು ಜನರಿಗೆ ಕೋವಿಡ್‌ ಸೋಂಕು; 133ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ

ವಿಜಯಪುರ: ಜಿಲ್ಲೆಯಲ್ಲಿ ಬುಧವಾರ ಆರು ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢವಾಗಿದೆ.

39 ವರ್ಷ ವಯಸ್ಸಿನ ವ್ಯಕ್ತಿ(ಪಿ3996)ಯೊಬ್ಬರಿಗೆ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿದೆ. 68 ವರ್ಷ ವಯಸ್ಸಿನ ಇಬ್ಬರು ವೃದ್ಧರಿಗೆ(ಪಿ3974 ಮತ್ತು ಪಿ3976), 70 ವರ್ಷ ವಯಸ್ಸಿನ ಇಬ್ಬರು ವೃದ್ಧೆಯರಿಗೆ (ಪಿ3972 ಮತ್ತು ಪಿ 3973) ಹಾಗೂ 55 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ(ಪಿ3975) ಜಿಲ್ಲೆಯ ಕಂಟೈನ್ಮೆಂಟ್‌ ಜೋನ್‌ ಸಂಪರ್ಕದಿಂದ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 133ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಈಗಾಗಲೇ 5 ಜನ ಸಾವಿಗೀಡಾಗಿದ್ದಾರೆ. 61 ಜನ ಬಿಡುಗಡೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು