ಭಾನುವಾರ, ಮೇ 22, 2022
24 °C

ಅಪಾರ ಪ್ರಮಾಣದ ಮಾವಾ ವಶ: ಏಳು ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಖೂಬಾ ಮಸೀದಿ ಸಮೀಪ ಪತ್ರಾಸ್‌ ಶೆಡ್ಡಿನ ಮನೆಯೊಂದರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದಲ್ಲಿ ಮಾವಾ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಇಂಡಿ ಡಿವೈಎಸ್‌ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ, ಏಳು ಜನರನ್ನು ಬಂಧಿಸಿದ್ದಾರೆ.

ಚಡಚಣ ನಿವಾಸಿಗಳಾದ ಹುಸೇನ್‌ ಸಾಬ್‌ ನದಾಫ್‌, ಗಣೇಶ ಮೋರೆ, ಬಂಡು ಬುರುಡ, ಹಾವಿನಾಳದ ಪರಶುರಾಮ ವಾಘ್ಮೋರೆ, ರಾಜು ವಾಘ್ಮೋರೆ, ಗೌಸ್‌ ಕಾಮಲೆ ಮತ್ತು ಶಂಕರ ಬುರುಡ ಎಂಬುವವರು ಪೊಲೀಸರಿಗೆ ಸೆರೆ ಸಿಕ್ಕಿ ಆರೋಪಿಗಳು.

ಆರೋಪಿಗಳಿಂದ ಮಾವಾ ತಯಾರಿಕೆಗೆ ಬಳಸುವ ₹ 3 ಲಕ್ಷ ಮೌಲ್ಯದ 50 ಅಡಿಕೆ ಚೂರಿನ ಚೀಲಗಳು, ₹ 33 ಸಾವಿರ ಮೌಲ್ಯದ ತಲಾ 10 ಕೆ.ಜಿ.ತೂಕದ 22 ಸುಣ್ಣದ ಚೀಲಗಳು, ₹4,200 ಮೌಲ್ಯದ 10 ಕೆ.ಜಿ.ತೂಕದ ತಂಬಾಕಿನ ಮೂರು ಪ್ಯಾಕೇಟ್‌ಗಳು, ₹11 ಸಾವಿರ ಮೌಲ್ಯದ 550 ಮಾವಾ ಪ್ಯಾಕೇಟ್‌ಗಳು, ₹25 ಸಾವಿರ ಮೌಲ್ಯದ ಮಾವಾ ತಯಾರಿಸುವ ಮಷಿನ್‌, ₹6 ಸಾವಿರ ಮೌಲ್ಯದ ಸಣ್ಣ ಪ್ಲಾಸ್ಟಿಕ್‌ ಪಾಕೀಟ್‌, ರಬ್ಬರ್‌ ಹಾಗೂ ಆರೋಪಿಗಳ ಬಳಿ ಇದ್ದ 6 ಮೊಬೈಲ್‌ಗಳು ಸೇರಿದಂತೆ ₹3,87,300 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಡಚಣ ಪಿಎಸ್‌ಐ ಎಂ.ಎ.ಸತಿಗೌಡರ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು