ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲ್ಹಾರ | ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

Published : 15 ಸೆಪ್ಟೆಂಬರ್ 2024, 13:51 IST
Last Updated : 15 ಸೆಪ್ಟೆಂಬರ್ 2024, 13:51 IST
ಫಾಲೋ ಮಾಡಿ
Comments

ಕೊಲ್ಹಾರ : ಪಟ್ಟಣದ ಹೊರವಲಯದ ಬನ್ನಿಹಳ್ಳದ ಹತ್ತಿರ ಶನಿವಾರ ರಾತ್ರಿ ಜಮೀನಿನಲ್ಲಿ ಮೊಸಳೆ  ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ರೈತ ಪ್ರಾಣೇಶ್ ಪತ್ತಾರ ಅವರ ಜಮೀನಿನ ಗೋವಿನ ಜೋಳದಲ್ಲಿ ರಾತ್ರಿ ಪ್ರತ್ಯಕ್ಷವಾದ ಮೊಸಳೆಯನ್ನು ಹೊಲದಲ್ಲಿದ್ದ ರೈತ ಸುರೇಶ ಶಿವನ್ನವರ ಹಾಗೂ ಅರ್ಜುನ್ ಬ್ಯಾಲ್ಯಾಳವರು  ನೋಡಿ  ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ತಡರಾತ್ರಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಕೃಷ್ಣಾ ನದಿಗೆ ಬಿಟ್ಟಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ಬಸವರಾಜ ಕೊಣ್ಣೂರ ಮಾತನಾಡಿ, ‘ಸಮೀಪದಲ್ಲಿ ಕೃಷ್ಣಾ ನದಿ ಇರುವುದರಿಂದ ನದಿಯ ಒತ್ತು ಈ ಹಳ್ಳಕ್ಕೆ ಬಂದಿರುವುದರಿಂದ ಮೊಸಳೆ ಬಂದಿದೆ’ ಎಂದರು. 

ಇಲಾಖೆ ಸಿಬ್ಬಂದಿಯಾದ ಈಶ್ವರಯ್ಯ ಹಿರೇಮಠ, ನಾಗೇಶ್ ವಡ್ಡರ, ಶರಣು ಬೆವರು, ಸ್ಥಳೀಯ ರೈತರಾದ ಸಂಗಪ್ಪ ಕೊಟಿ,ಖಾಸಿಂ ವಾಲಿಕಾರ ಸುರೇಶ್ ಶಿವನ್ನವರ, ಸಂಗಪ್ಪ ಬಾಟಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT