ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ: ಬಿರಾದಾರ

Last Updated 7 ಡಿಸೆಂಬರ್ 2022, 14:27 IST
ಅಕ್ಷರ ಗಾತ್ರ

ವಿಜಯಪುರ: ದೇಶದ ರಾಜಧಾನಿ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಗೆಲುವಿನ ಪರಿಣಾಮ ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಬೀರಲಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಡಾ. ಬಿ.ಎಂ.ಬಿರಾದಾರ ತಿಳಿಸಿದರು.

ನಗರದ ಗಾಂಧಿ ಚೌಕಿಯಲ್ಲಿ ಬುಧವಾರ ಎಎಪಿ ಏರ್ಪಡಿಸಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಾದ್ಯಂತ ಜನರು ಆಮ್ ಆದ್ಮಿ ಪಾರ್ಟಿಯತ್ತ ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿರುವುದು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ. ಕರ್ನಾಟಕದಲ್ಲಿಯೂ ಕೂಡ ಬಹುಮತದೊಂದಿಗೆ ಆಮ್ ಆದ್ಮಿ ಪಾರ್ಟಿಯು ಅಧಿಕಾರದ ಗದ್ದುಗೆ ಏರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 15 ವರ್ಷಗಳಿಂದ ಎಂಸಿಡಿಯಲ್ಲಿ ಅಧಿಕಾರ ಹೊಂದಿದ್ದ ಬಿಜೆಪಿಯು ಕಳಪೆ ಕಾಮಗಾರಿಗಳ ಮೂಲಕ ದೆಹಲಿಗೆ ಕೆಟ್ಟ ಹೆಸರು ತಂದಿತ್ತು. ಅಧಿಕಾರದ ಮದದಲ್ಲಿದ್ದ ಬಿಜೆಪಿಯು ಜನರ ಭಾವನೆಗೆ ಸ್ಪಂದಿಸುವುದನ್ನೇ ಮರೆತಿತ್ತು ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಕೂಡ ಬಿಜೆಪಿ ಅದೇ ತಪ್ಪುಗಳನ್ನು ಅಲ್ಲಿಗಿಂತ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು ಜಿಲ್ಲೆಯ ಪ್ರಜ್ಞಾವಂತ ಜನರು ಪಣತೊಟ್ಟಿದ್ದು, ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ಮುಖಂಡರಾದರೋಹನ್ ಐನಾಪುರ, ಧನರಾಜ ಬಸವಂತಿ, ಭೋಗೇಶ್ ಸೋಲಾಪುರ, ನಿಹಾದ ಅಹಮದ್ ಗೊಡಿಹಾಳ, ಮಲ್ಲಿಕಾರ್ಜುನ ಕೆಂಗನಾಳ, ಅನ್ನಪೂರ್ಣ ಬೆಳ್ಳನ್ನವರ, ಬಾಬು ಬಿಜಾಪುರ,ಯುವರಾಜ ಚೋಳಕೆ, ಯೂಸುಫ್ ಜಮಾದಾರ್, ಜ್ಯೋತಿಬಾ ಹೊನ್ನಕಲಸೆ, ಅಪ್ಪನಗೌಡ ಪಾಟೀಲ, ನಾರಾಯಣ ಸಂಸ್ಥಾನಿಕ್, ಮೀರಾಸಾಬ್ ದಳವಾಯಿ, ಅಮೀರ್ ಸೊಹೈಲ್ ಪಟೇಲ್, ಯೂಸುಫ್ ಪಟೇಲ್, ಯುನುಸ್ ಇನಾಮದರ್, ಇಂದ್ರಜಿತ್ ಜಾಧವ್, ರಾಹುಲ್, ಅನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT