ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಗಡಿಪಾರಿಗೆ ಕ್ರಮ: ಎಸ್‌ಪಿ

ಕೊಲೆ, ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು
Last Updated 1 ಮಾರ್ಚ್ 2021, 16:25 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಎಂಟು ಆರೋಪಿಗಳ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿ ಮೂವರನ್ನು ಗಡಿಪಾರು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ವಿಜಯಪುರದಚಾಂಚಫೀರ ಅಲಿಯಾಸ್‌ ರಮಲಿ ಇನಾಮದಾರ (12 ಪ್ರಕರಣಗಳಲ್ಲಿ ಭಾಗಿ),ಇಂಡಿ ತಾಲ್ಲೂಕಿನಅಹಿರಸಂಗದಸೈಫನ್ಸಾ‌ಬ್ ಮಕಾನದಾರ(11 ಪ್ರಕರಣಗಳಲ್ಲಿ ಭಾಗಿ) ಹಾಗೂ ವಿಜಯಪುರದಸತೀಶ ನಾಯಕ (14 ಪ್ರಕರಣಗಳಲ್ಲಿ ಭಾಗಿ) ಎಂಬುವವರನ್ನು ಗಡಿಪಾರು ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.

ತಾಂಬಾದದೇವೇಂದ್ರ ತದ್ದೇವಾಡಿ (16 ಪ್ರಕರಣಗಳಲ್ಲಿ ಭಾಗಿ),ನಾಗಠಾಣದ ಚಂದ್ರಶೇಖರ ವಾಡೇದ (8 ಪ್ರಕರಣಗಳಲ್ಲಿ ಭಾಗಿ),ನಾವದಗಿಯ ಸಂಗನಗೌಡ ಅಂಬರಣ್ಣಗೌಡ ಸಂಕನಾಳ(4 ಪ್ರಕರಣಗಳಲ್ಲಿ ಭಾಗಿ), ವಿಜಯಪುರದಹೈದರಅಲಿ ನದಾಫ್(15 ಪ್ರಕರಣಗಳಲ್ಲಿ ಭಾಗಿ) ಮತ್ತುಹಿಂಗಣಿಯ ಪೀರಪ್ಪ ಕಟ್ಟಮನಿ(7 ಪ್ರಕರಣಗಳಲ್ಲಿ ಭಾಗಿ) ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 702 ಜನರ ಮೇಲೆ ಎಂ.ಒ.ಬಿ ಕಾರ್ಡನ್ನು ತೆರೆಯಲಾಗಿರುತ್ತದೆ. ಅಲ್ಲದೇ, 78 ಜನರ ಮೇಲೆ ರೌಡಿ ಶೀಟ್ ತೆರೆದು ಅವರ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.

ಇಬ್ಬರು ಮನೆಗಳ್ಳರ ಬಂಧನ

ನಗರದ ವಿವಿಧ ಬಡಾವಣೆಗಳಲ್ಲಿ ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸಿ, ಆರೋಪಿಗಳ ಬಳಿ ಇದ್ದ 201.7 ಗ್ರಾಂ ಬಂಗಾರದ ಆಭರಣ ಹಾಗೂ 270 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಅಂದಾಜು ₹ 9,76,200 ಕಿಮ್ಮತ್ತಿನ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದ ಜಗದಾಳೆ ಗಲ್ಲಿ ಹಾಗೂ ಸೇನಾನಗರದಲ್ಲಿ ಮನೆಗಳಲ್ಲಿ ಕಳ್ಳತನ ಮಾಡಿದ್ದಜೋರಾಪುರ ಪೇಟೆ ವಾಟರ್‌ ಟ್ಯಾಂಕ್‌ ಹತ್ತಿರದ ನಿವಾಸಿರೋಹಿತ ‌ಕಾಯಗೊಂಡ(33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಳಿಯಿಂದ 101.7 ಗ್ರಾಂ ಬಂಗಾರದ ಆಭರಣಗಳು ಹಾಗೂ 270 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಅಂದಾಜು ₹ 4,96,200 ಕಿಮ್ಮತ್ತಿನ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ರಹೀಂ ನಗರ, ಶಾಸ್ತ್ರಿ ನಗರ, ಕುಲಕರ್ಣಿ ಲೇ ಔಟ್, ಟ್ರೇಜರಿ ಕಾಲೊನಿ ಅಯ್ಯಾಪ್ಪ ಸ್ವಾಮಿ ನಗರ ಸೇರಿದಂತೆ ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿದ್ದಬೆಳಗಾವಿ ಜಿಲ್ಲೆ ಅಥಣಿಯ ಗವಿಸಿದ್ಧನಮಡ್ಡಿಯ ನಿವಾಸಿ ಅಸ್ಲಂ ಸಣದಿ(27) ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಬಳಿ ಇದ್ದ ಅಂದಾಜು ₹4.80 ಲಕ್ಷ ಮೌಲ್ಯದ100 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ವೈನ್ ಶಾಪ್‍ ಕಳ್ಳರ ಬಂಧನ

ಬಬಲೇಶ್ವರ ಪಟ್ಟಣದ ಎಂ.ಎಸ್.ಐ.ಎಲ್ ವೈನ್ ಶಾಪ್‍ ಹಾಗೂ ಇಂಡೇನ್ ಗ್ಯಾಸ್‌ ಗೋಡೌನ್‌ ಕೀಲಿ ಮುರಿದು ಕಳ್ಳತನ ಮಾಡಿದ್ದಹಂಚನಾಳ ತಾಂಡಾ ನಂ 2ರ ಸಂತೋಷ ರಾಠೋಡ, ಮಿಥುನ ರಾಠೋಡ, ಅನೀಲ ಚವ್ಹಾಣ ಹಾಗೂಬೋಳಚಿಕ್ಕಲಕಿ ನಿವಾಸಿಗಳಾದ ಬಸಯ್ಯ ಮಠಪತಿ, ಮನೋಜ ಸಿಂಗೆ, ಸಂತೋಷ ಲೊನಾರ, ರಫೀಕ್‌ ಮೀರಾಸಾಬ ಸೊರೆಗೋಳ, ಸುಂದರ್‌ ಹರಿಜನ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ₹ 29 ಸಾವಿರ ನಗದು, ‌ಎರಡು ಲ್ಯಾಪ್‌ಟಾಪ್‌, ಒಂದು ಮೊಬೈಲ್‌, ಒಂದು ಡಿವಿಆರ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ ಎರಡು ಬೈಕ್‌ ಹಾಗೂ ಒಂದು ಗೂಡ್ಸ್‌ ವಾಹನ ಹಾಗೂ 116 ಗ್ರಾಂ ಬಂಗಾರದ ಆಭರಣ ಸೇರಿದಂತೆ ಒಟ್ಟು ₹ 5.80 ಲಕ್ಷ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಭಿಕ್ಷುಕನ ಕೊಲೆ ಆರೋಪಿ ಬಂಧನ

ವಿಜಯಪುರ: ನಗರದ ಆಶ್ರಮ ಹತ್ತಿರದ ಟೀಚರ್ಸ್ ಕಾಲೊನಿ ಬಸ್‌ ತಂಗುದಾಣದಲ್ಲಿ ಫೆ.14ರಂದು ರಾತ್ರಿ ಮಲಗಿದ್ದ ಭಿಕ್ಷುಕನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದರ್ಶನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆಶ್ರಮ ಹತ್ತಿರದ ಸುರಕ್ಷ ಕಾಲೊನಿಯ ಮಾಂತೇಶ ಅಲಿಯಾಸ್‌ ಬ್ಲೇಡ್ ಮಾಂತ್ಯಾ(28) ಬಂಧಿತ ಆರೋಪಿಯಾಗಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಕೊಲೆ ಆರೋಪಿಗಳ ಬಂಧನ

ವಿಜಯಪುರ: ಚಡಚಣ ಪೊಲೀಸ್‌ ಠಾಣೆ ವ್ಯಾಪ್ತಿಯ ಹಾವಿನಾಳದ ಬೋರಿ ಹಳ್ಳದ ಬಳಿ ಜನವರಿ 1ರಂದು ನಡೆದಿದ್ದ ರಾಯಗೊಂಡ ಪ್ರಭು ಪೂಜಾರಿ(35) ಎಂಬಾತನಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌

ಕೊಲೆಯಾದ ರಾಯಗೊಂಡ ಪ್ರಭು ಪೂಜಾ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಕಾಸಪ್ಪ ಪೂಜಾರಿ ಎಂಬಾತ ಪರಮೇಶ್ವರ ಬನಸೋಡೆಯೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಶ್ಲೀಲ ಬರಹ ಪೋಸ್ಟ್‌: ಬಂಧನ

ವಿಜಯಪುರ: ಇಂಡಿ ತಾಲ್ಲೂಕಿನ ಲಾಳಸಂಗ ಗ್ರಾಮದ ಹಿರಿಯರು ಮತ್ತು ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಬರಹ ಮತ್ತು ಅಶ್ಲೀಲ ಚಿತ್ರಗಳನ್ನುಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದ ಅದೇ ಗ್ರಾಮದ ನಿವಾಸಿ, ಹಾಲಿ ಪುಣಿಯ ಚಿಂಚವಾಡದಲ್ಲಿ ವಾಸವಾಗಿರುವಇರ್ಫಾನ್‌ ನದಾಫ್(38) ಎಂಬಾನನ್ನು ಪೊಲೀಸರು ಬಂಧಿಸಿದ್ದಾರೆ.

ಶೂಟ್‌ಔಟ್‌ ಪ್ರಕರಣ: 36 ಜನರ ಬಂಧನ

ವಿಜಯಪುರ: ನಗರದ ಹೊರವಲಯದ ಕನ್ನಾಳ ಕ್ರಾಸ್‌ ಬಳಿ ಕಳೆದ ನವೆಂಬರ್ 2ರಂದು ನಡೆದ ಕಾಂಗ್ರೆಸ್‌ ಮುಖಂಡ ಮಹಾದೇವ ಬೈರಗೊಂಡ ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಜನ ಆರೋಪಿಗಳ ಪೈಕಿ ಇದುವರೆಗೆ 36 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌ ತಿಳಿಸಿದ್ದಾರೆ.

ಆರೋಪಿಗಳ ಬಳಿ ಇದ್ದ 5 ಕಂಟ್ರಿ ಪಿಸ್ತೂಲ್‌ ಹಾಗೂ 8 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

13 ಬೈಕ್‌, ಎರಡು ಅಟೋ ರಿಕ್ಷಾ, ಒಂದು ಟಿಪ್ಪರ್, ನಾಲ್ಕು ಕಾರು ಹಾಗೂ 32 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT