ದೇವರಹಿಪ್ಪರಗಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಮೂನೆ-6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ಕೂಲಿಕಾರರಿಗೂ ಕಡ್ಡಾಯವಾಗಿ ಕೆಲಸ ಒದಗಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಹೇಳಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಜರುಗಿದ ಅಧ್ಯಕ್ಷತೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿವಿಧ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಜಿ.ಕೆ.ಎಂ. ಟಿಆರ್ಎಂ, ಬಿ.ಎಫ್.ಟಿ. ಮನೆಮನೆಗೆ ತೆರಳಿ ನಮೂನೆ-6 ಕೆಲಸದ ಬೇಡಿಕೆ ಸ್ವೀಕರಿಸಿ, ಕೂಲಿಕಾರರಿಗೆ ಯೋಜನೆಯ ಸೌಲಭ್ಯ ತಲುಪುವಂತೆ ಕ್ರಮವಹಿಸಬೇಕು. ಇ-ಕೆವೈಸಿ ಪ್ರಗತಿಯನ್ನು ಶೇ 100ಕ್ಕೆ ತಲುಪಿಸುವಂತೆ ಸೂಚಿಸಿದ ಅವರು, ಗುರಿ ಸಾಧನೆಯಲ್ಲಿ ನಿರ್ಲಕ್ಷ್ಯ ತೋರಿದ ಜಿ.ಕೆ.ಎಂ, ಟಿ.ಆರ್.ಎಂ ಹಾಗೂ ಬಿ.ಎಫ್.ಟಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಲೇಬರ್ ಎಂಗೇಜ್ ಹೆಚ್ಚಿಸುವುದು, ಜೀರೋ ಎನ್ಎಂಆರ್ ತಡೆಗಟ್ಟುವುದು, ಮಾನವ ದಿನಗಳ ಸೃಜನೆ, ಪೇಸ್ ಅಥೆಂಟಿಕೇಶನ್ ಪ್ರಗತಿ, ಯುಕ್ತಧಾರದಲ್ಲಿ ವರ್ಕ್ ಎಂಟ್ರಿ, ಕಾಮಗಾರಿಗಳ ಪೂರ್ಣಗೊಳಿಸುವುದು ಬಾಕಿ ಕೂಲಿ ಪಾವತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸವಿಸ್ತಾರ ಚರ್ಚೆ ನಡೆಸಲಾಯಿತು.

ಪಂಚಾಯತ್ ರಾಜ್ ಇಲಾಖೆಯ ಕರವಸೂಲಾತಿ ಪ್ರಗತಿ ಹಾಗೂ ಅಡ್ ಹಾಕ್ ವಿಷಯಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳು, ಕಂಡಿಕೆಗಳು ಮತ್ತು ವಸೂಲಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ತಾಂತ್ರಿಕ ಸಂಯೋಜಕರಾದ ಶರಣಗೌಡ ಪಾಟೀಲ್, ತಾಂತ್ರಿಕ ಸಹಾಯಕ ಸೊಹೇಬ ಮಾರಡಗಿ, ಅರ್ಷದ್ ಕೋಟ್ಯಾಳ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಆಡಳಿತ ಸಹಾಯಕ ಪವನ ಜೋಶಿ, ಕಂಪ್ಯೂಟರ್ ಸಿಬ್ಬಂದಿ ಕಿರಣ್ ಪಾಟೀಲ್ ಕಂಪ್ಯೂಟರ್ ಆಪರೇಟರ್ಗಳು, ಜಿ.ಕೆ.ಎಂ, ಬಿ.ಎಫ್.ಟಿ, ಟಿ.ಆರ್.ಎಂ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-26-712788253

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.