ದೇವರಹಿಪ್ಪರಗಿ: ಸಾಂಪ್ರದಾಯಿಕ ಬಾದ್ಮಿ ಅಮವಾಸ್ಯೆಯಂದು ಜರುಗುವ ಚೌಡೇಶ್ವರಿ ದೇವಿಯ ಜಾತ್ರೆ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಪಟ್ಟಣದಲ್ಲಿ ಶನಿವಾರ ಜಾತ್ರೆಯ ಅಂಗವಾಗಿ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಹರಕೆ ಹೊತ್ತ ಮಹಿಳೆಯರು ಮುತೈದೆಯರಿಗೆ ಉಡಿ ತುಂಬಿ ತಮ್ಮ ಭಕ್ತಿ ಮೆರೆದರು. ನಂತರ ನೆರೆದ ಭಕ್ತಮಂಡಳಿಗೆ ಮಹಾಪ್ರಸಾದ ವಿತರಿಸಲಾಯಿತು.

ಸಂಜೆ ಅರ್ಚಕರು ಪರಂಪರೆಯಂತೆ ದೇವಿಯ ಮುಖವಾಡ ಧರಿಸಿ ಮೇನ್ ಬಜಾರ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಡೊಳ್ಳುವಾದ್ಯದ ಮೇಳದೊಂದಿಗೆ ಮೆರವಣಿಗೆ ಹೊರಟರು. ನಂತರ ಸದಯ್ಯನಮಠದ ಗಂಗಾಸ್ಥಳ ತಲುಪಿ ಪುನಃ ಮರಳಿ ದೇವಸ್ಥಾನ ತಲುಪಿದರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಕೋಲಿ, ಕಬ್ಬಲಿಗ, ತಳವಾರ ಸಮುದಾಯದ ಭಕ್ತರು ದೇವಿಯ ಮುಂದೆ ಬಡಿಗೆ ಹಿಡಿದು, ಓಡುತ್ತಾ ಸಂಪ್ರದಾಯ ಪಾಲನೆ ಮಾಡಿ ನೋಡುಗರ ಗಮನ ಸೆಳೆದರು.

ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇ ವಾಡ ಸೇರಿದಂತೆ ಶಿವಾನಂದ ಕುಂಬಾರ, ಬಸವರಾಜ ಕುಂಬಾರ, ಭೀಮರಾಯ ಕುಂಬಾರ, ಸಿದ್ದು ಕುಂಬಾರ, ಸಿಂಧೂರ ಸೇಬೆನವರ, ಸಂಪತ್ ಜಮಾದಾರ, ಕಾಶೀನಾಥ ಕುಂಬಾರ, ಚಿದಾನಂದ ಕುಂಬಾರ, ಮಾಳಪ್ಪ ಪೂಜಾರಿ, ಸೋಮು ಹಡಪದ, ಜಗದೀಶ ಮೆಟಗಾರ ಸೇರಿದಂತೆ ಪಟ್ಟಣದ ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-26-62533097

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.