ದೇವರಹಿಪ್ಪರಗಿ: ‘ಸಾರ್ಥಕ ಬದುಕಿಗೆ ದೇವರ ದಾಸಿಮಯ್ಯನಂತಹ ಅಸಂಖ್ಯಾತ ಶರಣರ ವಚನಗಳು ದಾರಿ ದೀಪಗಳಾಗಿವೆ’ ಎಂದು ಬಸವ ಶರಣ ಸಂಗಮ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಸಾರ್ಥಕ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಶರಣರ ವಚನಗಳು, ಸಂತರ ಅಭಂಗಗಳು ಹಾಗೂ ದಾಸರ ಪದಗಳು ನಿದರ್ಶನಗಳಾಗಿವೆ ಎಂದರು.

10ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನ ಜೀವನ, ಸಾಧನೆ, ಅಚಲ ಕಾಯಕ ಹಾಗೂ ವಚನಗಳ ಕುರಿತು ವಿವರಿಸಿದರು.

ಉಪತಹಶೀಲ್ದಾರ್ ಸುರೇಶ ಮ್ಯಾಗೇರಿ, ಚಂದ್ರಶೇಖರ ಹೊಸಮನಿ, ನೀಲಕಂಠ ಮಶಾನವರ, ರೇವಣಸಿದ್ಧ ನಂದ್ಯಾಳ ಈರಣ್ಣ ಮಶಾನವರ, ಹನುಮೇಶ ನಂದ್ಯಾಳ, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-2029027857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.