ದೇವರಹಿಪ್ಪರಗಿ ತಾಲ್ಲೂಕು ಕೇಂದ್ರವಾಗಿ ದಶಕದ ಸನಿಹದಲ್ಲಿದಲ್ಲಿರುವ ದೇವರಹಿಪ್ಪರಗಿ ಪಟ್ಟಣ ಸದ್ಯ ಶೈಕ್ಷಣಿಕ ದಾಸೋಹದ ತಾಲ್ಲೂಕು ಎಂದು ಗುರುತಿಸುವಂತಾಗಿದ್ದು, 15ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಿವೆ.

ನೂತನ ತಾಲ್ಲೂಕು ಕೇಂದ್ರವಾಗಿ ಸುಮಾರು ಎಂಟು ವರ್ಷಗಳ ಕಳೆದರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ಹೊರತಾಗಿ ಯಾವುದೇ ಸರ್ಕಾರಿ ಉನ್ನತ ಶೈಕ್ಷಣಿಕ ಸಂಸ್ಥೆಗಳು ಇರದ ತಾಲ್ಲೂಕು ವ್ಯಾಪ್ತಿಯಡಿ ಹಾಗೂ ಕೇಂದ್ರ ಸ್ಥಳದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ವಿದ್ಯಾರ್ಥಿಗಳ ಕಾಲೇಜು ಹಂತದವರೆಗಿನ ಶಿಕ್ಷಣಕ್ಕೆ ಆಧಾರಗಳಾಗಿವೆ.

ಪಟ್ಟಣದ ಎಸ್ಜೆಎಂವಿವಿ ಸಂಘದ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆ ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ.

ಬಿ.ಎಲ್.ಡಿ,ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು (ಕಲಾ ಹಾಗೂ ವಾಣಿಜ್ಯ ವಿಭಾಗಗಳು), ಶ್ರೀಭಾಗ್ಯವಂತಿ ವಿದ್ಯಾಸಂಸ್ಥೆಯ ಚೈತನ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಎಸ್.ಎಸ್ ಹಾಗೂ ಎಸ್ಕೆ ಸಂಸ್ಥೆಯ ಜ್ಞಾನಜ್ಯೋತಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪ್ರಿನ್ಸ್ ಪಬ್ಲಿಕ್ ಶಾಲೆ, ಶ್ರೀನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಶಾರದಾ ಪ್ರೌಢಶಾಲೆ, ಎಲ್.ಪಿ.ಎಸ್.ಬಿ ಫೌಂಡೇಷನ್ನ ಶಾಕಾಂಬರಿ ಪಬ್ಲಿಕ್ ಶಾಲೆ, ಸಾವಳಗಿ ಶಿಕ್ಷಣ ಸಂಸ್ಥೆಯ ಇಂದುಮತಿ ಸಾವಳಗಿ ಶಾಲೆ, ಶ್ರೀಅನ್ನಪೂರ್ಣೇಶ್ವರಿಗ್ರಾಮಾಭಿವೃದ್ಧಿ ಸಂಸ್ಥೆಯ ಭಾರತಿ ವಿದ್ಯಾಪೀಠ, ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆ, ಜೆಎಂಜೆ ಶಿಕ್ಷಣ ಸಂಸ್ಥೆ ಶೈಕ್ಷಣಿಕ ದಾಸೋಹ ಹಾಗೂ ಸೇವೆಯಲ್ಲಿ ನಿರತರಾಗಿವೆ.

ತಾಲ್ಲೂಕಿನ ಗಡಿ ಗ್ರಾಮ ಹಿಟ್ಟಿನಹಳ್ಳಿಯ ಜಗದಂಬಾ ಶಿಕ್ಷಣ ಸಂಸ್ಥೆ ಸಾಕಷ್ಟು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇಯಾದ ಕೊಡುಗೆ ನೀಡಿದೆ. ದೇವರಹಿಪ್ಪರಗಿ ಪಟ್ಟಣದ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಪಟ್ಟಣದ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗಗಳ ಕಾಲೇಜು ಹಾಗೂ ಪಡಗಾನೂರ, ಮಣೂರ, ಯಲಗೋಡ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪ್ರಸಾರದಲ್ಲಿ ನಿರತರಾಗಿವೆ

ತಾಲ್ಲೂಕು ಕೇಂದ್ರದ ಸ್ಥಳವಾದ ಪಟ್ಟಣದಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ಆರಂಭಗೊಂಡ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು ಸಹ ನೂತನ ಕಟ್ಟಡದೊಂದಿಗೆ ಗಮನಾರ್ಹ ಶಿಕ್ಷಣಕ್ಕೆ ಹೆಸರಾಗಿದೆ. ಈ ಎಲ್ಲಾ ಶಿಕ್ಷಣ ಸಂಸ್ಥೆಗಳ ಹೊರತಾಗಿ ತಾಳಿಕೋಟೆ ರಸ್ತೆಯಲ್ಲಿನ ಸನ್ಮಾರ್ಗ ಶಿಕ್ಷಣ ಸಂಸ್ಥೆ, ಸರ್ವಜ್ಞ ಶಿಕ್ಷಣ ಸಂಸ್ಥೆಗಳು ಸಹ ಸ್ವಂತ ಕಟ್ಟಡಗಳೊಂದಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ನಿರತವಾಗಿವೆ. ಇನ್ನೂ ಬಿಎಲ್ಡಿಇ ಸಂಸ್ಥೆ ಮಕ್ಕಳ ಶಿಕ್ಷಣಕ್ಕಾಗಿ ಸಿಬಿಎಸ್ಸಿ ಶಾಲೆ ಆರಂಭಕ್ಕೆ ಕ್ರಮ ಕೈಗೊಂಡಿದ್ದು ಅದಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ಬಹುತೇಕ 2028 ಜೂನ್ ವೇಳೆಗೆ ಆರಂಭಗೊಳ್ಳಲಿದೆ.

ನೂತನ ತಾಲ್ಲೂಕು ದೇವರಹಿಪ್ಪರಗಿ ಕೇಂದ್ರಸ್ಥಳ ಹಾಗೂ ವ್ಯಾಪ್ತಿಯಲ್ಲಿ ಕನ್ನಡ ಹಾಗೂ ಆಂಗ್ಲಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕೊರತೆಯಿಲ್ಲ. ಆದರೆ, ಪದವಿ ಹಂತದಲ್ಲಿ ವಿವಿಧ ಉನ್ನತ ವೈದ್ಯಕೀಯ, ತಾಂತ್ರಿಕ ವಿಭಾಗಗಳ ಕಾಲೇಜುಗಳು ಆರಂಭಗೊಳ್ಳಬೇಕಿದೆ ಅದಕ್ಕಾಗಿ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ತಾಲ್ಲೂಕು ಶಿಕ್ಷಣ ತಜ್ಞರ, ಪ್ರೇಮಿಗಳ ಆಗ್ರಹ. ಆದರೆ, ಸರ್ಕಾರ ಮುಂದಿನ ದಿನಗಳಲ್ಲಿ ಈ ಬೇಡಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕಷ್ಟೇ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-1651058358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.