ದೇವರಹಿಪ್ಪರಗಿ: ಮಾನವ ಕಲ್ಯಾಣ ಹಾಗೂ ಇಡೀ ಸಮಾಜ ಒಂದಾಗಿ ಬಾಳಬೇಕು ಎನ್ನುವುದೇ ಪಂಚಪೀಠಗಳ ಆಶಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು.

ಪಟ್ಟಣದ ಜಡಿಮಠ ಮಹಾದ್ವಾರ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡುವುದರ ಮೂಲಕ ಆಶೀರ್ವಚನ ನೀಡಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣದಲ್ಲಿ ಐದು ಮಠಗಳಿದ್ದು ಅವುಗಳ ಪೀಠಾಧ್ಯಕ್ಷರ ನೇತೃತ್ವದಲ್ಲಿ ಇಲ್ಲಿ ವೀರಶೈವ ಧರ್ಮ, ಪರಂಪರೆ ಬೆಳವಣಿಗೆಯಲ್ಲಿ ನಿರತವಾಗಿವೆ. ಅವರ ಮಾರ್ಗದರ್ಶನದಲ್ಲಿ ಪಂಚಪೀಠಾಧಿಪತಿಗಳಿಗೆ ಸಂದರ್ಭನುಸಾರವಾಗಿ ಗೌರವ ನೀಡಲಾಗಿದೆ ಎಂದರು.

ಜಡಿಮಠ ಜಡಿಸಿದ್ಧೇಶ್ವರಶ್ರೀಗಳು ಮಾತನಾಡಿ, ಬಿಜೆಪಿ ಧುರೀಣ ಬಸನಗೌಡ ಪಾಟೀಲ (ಯಡಿಯಾಪೂರ) ಅವರ ಸಹಕಾರ ಹಾಗೂ ಜವಾಬ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಮಹಾದ್ವಾರಕ್ಕೆ ಪೂಜ್ಯ ಶ್ರೀಗಳು ಚಾಲನೆ ನೀಡಿದ್ದು ಅತ್ಯಂತ ಸಂತೋಷಕರ ಸಂದರ್ಭ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಡಾ.ಆರ್.ಆರ್.ನಾಯಿಕ್, ಪ್ರಭುದೇವ ಹಿರೇಮಠ, ಬಿ.ಎಸ್.ಶಾಬಾದಿ(ತೆಗನೂರ), ಸಾಹೇಬಗೌಡ ಬಿರಾದಾರ(ಬೂದಿಹಾಳಡೋಣ), ಉಮಾಕಾಂತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-1683105776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.