ದೇವರಹಿಪ್ಪರಗಿ: ಇಲಾಖೆಯಲ್ಲಿ ಯಾವುದೇ ಸಿಬ್ಬಂದಿ ಸೇವಾತತ್ಪರತೆಯ ಮೂಲಕ ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಅಂಚೆ ಅಧಿಕ್ಷಕ ಮಹಾಂತೇಶ ತೋಗರಿ ಹೇಳಿದರು.

ಪಟ್ಟಣದ ಅಂಚೆ ಕಚೇರಿಯಲ್ಲಿ ಗುರುವಾರ ಸೇವಾ ನಿವೃತ್ತರಾದ ಡಾಕ್ಸೇವಕ ವೆಂಕಟೇಶ ಕುಲಕರ್ಣಿ ಅವರ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.

ಪಟ್ಟಣದಲ್ಲಿ ತಮ್ಮ ಸತತ 35 ವರ್ಷಗಳ ಕಾಲ ನಿಷ್ಕಳಂಕ ಸೇವೆಯ ಮೂಲಕ ಮನೆಮಾತಾಗಿರುವ ವೆಂಕಟೇಶ ಕುಲಕರ್ಣಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.

ಸನ್ಮಾನಿತರ ಪರ ಸುಪ್ರೀಯಾ ಕುಲಕರ್ಣಿ ಮಾತನಾಡಿ, ತಂದೆಯ ಸೇವೆಯ ಸಾರ್ಥಕತೆಗೆ ಇಲಾಖೆ ಪರವಾಗಿ ಸಂದ ಗೌರವಕ್ಕೆ ಅಭಿನಂದನೆ ಸಲ್ಲಿಸಿದರು.

ಅಂಚೆ ನಿರೀಕ್ಷಕ ಕರಣ ಎಂ.ಜಿ. ಶಾರದಾ ಹೆಡಜೋಳ, ಮನೋಹರ ಪೋಳ, ಅಮರೇಶ ಕಲಶೆಟ್ಟಿ, ಬಸಯ್ಯ ಸ್ಥಾವರಮಠ, ಭಾಗ್ಯ ಪುರವಂತರಮಠ, ಕೀರ್ತಿ ಪಾಟೀಲ, ಸುವರ್ಣ ಕಲಾಲ್, ಸುನಂದಾ ಬಿರಾದಾರ, ಪ್ರವೀಣ ಕುಲಕರ್ಣಿ, ಬಿ.ಟಿ.ಮಾದರ, ರಾಮನಗೌಡ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-26-2040722732

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.