ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಉತ್ಸಾಹ ಹೆಚ್ಚಳಕ್ಕೆ ಕ್ರೀಡೆ ಸಹಾಯಕ

ರಾಜ್ಯಮಟ್ಟದ ವಕೀಲರ ಕ್ರಿಕೆಟ್‌ ಟೂರ್ನಿಗೆ ಚಾಲನೆ
Last Updated 12 ಮೇ 2022, 14:06 IST
ಅಕ್ಷರ ಗಾತ್ರ

ವಿಜಯಪುರ: ದಿನವಿಡೀ ಕೋರ್ಟ್‌ ಕಲಾಪಗಳಲ್ಲಿ ಭಾಗವಹಿಸುವ ವಕೀಲರು ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸಹಜ. ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು, ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಕ್ರೀಡೆ ಸಹಾಯಕ ಎಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಅಭಿಪ್ರಾಯಪಟ್ಟರು.

ವಿಜಯಪುರ ವಕೀಲರ ಸಂಘವು ನಗರದ ಬಿಎಲ್‌ಡಿಇ ಮೈದಾನದಲ್ಲಿ ಏರ್ಪಡಿಸಿರುವ ವಕೀಲರ ರಾಜ್ಯಮಟ್ಟದ ಹೊನಲು‍– ಬೆಳಕಿನ ಕ್ರಿಕೆಟ್‌ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಕ್ರೀಡೆಯಿಂದ ಆರೋಗ್ಯ ಭಾಗ್ಯ ಲಭಿಸಲಿದೆ ಎಂದು ಹೇಳಿದರು.

ಕ್ರೀಡೆಯ ಮೂಲಕ ವಕೀಲರ ನಡುವೆ ಸೌಹಾರ್ದ ಮೂಡಲಿದೆ.ಕ್ರೀಡೆಗಳಲ್ಲೇ ಅತ್ಯಂತ ಜನಪ್ರಿಯವಾದ ಮತ್ತು ಮುಂಚೂಣಿಯಲ್ಲಿರುವ ಕ್ರಿಕೆಟ್‌ ಅನ್ನು ವಕೀಲರು ಆಡುವ ಮೂಲಕ ಹೊಸತನಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದು ಹೇಳಿದರು.

ವಿಜಯಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾಧ್ವೇಶ ದಬೇರ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನರಂಜನೆ ಜೊತೆಗೆ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌.ಎಸ್‌.ಮಿಟ್ಟಲಕೋಡ ಮಾತನಾಡಿ, ಕೋರ್ಟ್‌ನಲ್ಲಿ ನಡೆಯುವ ವಾದ, ವಿವಾದಗಳ ವಿಚಾರಣೆ ವೇಳೆ ಮಾನಸಿಕ ಒತ್ತಡ ಹೆಚ್ಚಾಗಿ ಆರೋಗ್ಯ ಹದಗೆಡುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ವಿಜಯಪುರ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಜಿರಾಳೆ, ಕ್ರಿಕೆಟ್‌ ಮಂಡಳಿ ಕಮಿಟಿ ಅಧ್ಯಕ್ಷ ಎಸ್‌.ಎಸ್‌.ಡೊಂಗರಗಾವಿ, ವಕೀಲರಾದಬಿ.ಎಸ್‌.ಸೊರಗಾಂವಿ, ಸಂಜಯ ಅಂಕಲಗಿ, ಎಸ್‌.ಎಸ್‌.ಮೂಡಲಗಿ, ಡಿ.ಜಿ.ಬಿರಾದಾರ, ವಿ.ಪಿ.ಜಾಮನಗೌಡರ, ಕೆ.ಕೆ.ಪಾಟೀಲ, ಎಸ್‌.ಬಿ.ಪಾಟೀಲ, ಎಸ್‌.ಬಿ.ಕುಮಟಗಿ, ಎಂ.ಸಿ.ಆನೇಗುಂದಿ, ಜಾಫರ್‌ ಅಂಗಡಿ, ಸಂತೋಷ, ಶ್ರೀನಾಥ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ನಡೆಯುವ ಈ ಕ್ರಿಕೆಟ್‌ ಟೂರ್ನಿಯಲ್ಲಿರಾಜ್ಯದ ವಿವಿಧ ಜಿಲ್ಲೆಗಳ 33 ತಂಡಗಳು ಪಾಲ್ಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT