ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ವಿದ್ಯುತ್ ಚಾಲಿನ ವಾಹನ ಸೇವೆಗೆ ಚಾಲನೆ

Last Updated 11 ಆಗಸ್ಟ್ 2022, 14:14 IST
ಅಕ್ಷರ ಗಾತ್ರ

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹರ್ ಘರ್ ತಿರಂಗಾ ಕಾರ್ಯಕ್ರಮವು ಮಯೂರ ಆದಿಲ್ ಶಾಹಿ ಹೋಟೆಲ್ ಆವರಣದಲ್ಲಿ ನಡೆಯಿತು.

ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಪರಿಸರ ಸ್ನೇಹಿ ಹಾಗೂ ಪ್ರವಾಸಿಗರ ಆಪ್ತವಾದ ಎಲೆಕ್ಟ್ರಿಕಲ್ ಟ್ಯಾಕ್ಸಿ(ವಿದ್ಯುತ್ ಕಾರು ಮತ್ತು ಆಟೋ) ಸೇವೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ಚಾಲನೆ ನೀಡಿದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಯೂರ ಆದಿಲ್ ಶಾಹಿ ಹೋಟೆಲ್ ಹಾಗೂ ಸ್ಥಳೀಯ ಇ-ಮೊಬಿಲಿಟಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಮಯೂರ ಆದಿಲ್ ಶಾಹಿಹೋಟೆಲ್ ವ್ಯವಸ್ಥಾಪಕ ಸುನೀಲ್‌ಕುಮಾರ್ ಎಸ್., ಪ್ರವಾಸೋದ್ಯಮ ಸಲಹಾ ಸಮಿತಿಯ ಸದಸ್ಯರಾದ ಜಿ.ಎಸ್.ಕಮತರ, ಅಮೀನ್ ಹುಲ್ಲೂರು, ಇ-ಮೊಬಿಲಿಟಿ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಮಯೂರ ಆದಿಲ್ ಶಾಹಿ ಹೋಟೆಲ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT