ಮುದ್ದೇಬಿಹಾಳ: ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆಯಿದ್ದರೆ ಮಾತ್ರ ಅವುಗಳ ಉನ್ನತಿ ಸಾಧ್ಯವಾಗುತ್ತದೆ ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿಮಿತ್ರ ಸಹಕಾರ ಸಂಘದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಯತ್ನಾಳ ಗೌಡರ ಮೇಲೆ ಜನರು ಇಟ್ಟ ವಿಶ್ವಾಸದಿಂದಲೇ ಇಂದು ರಾಜ್ಯದ ವಿವಿಧೆಡೆ 152 ಸಿದ್ಧಸಿರಿ ಬ್ಯಾಂಕ್‍ಗಳ ಶಾಖೆಗಳನ್ನು ತೆರೆದು ಸಾವಿರಾರು ಜನಕ್ಕೆ ಉದ್ಯೋಗ ನೀಡಲಾಗಿದೆ ಎಂದರು.
ರೈತರು ಈ ದೇಶದ ಬೆನ್ನೆಲುಬು ಎನ್ನುತ್ತೇವೆ. ಯಾವಾಗ ರೈತ ನೇರವಾಗಿ ಮಾರುಕಟ್ಟೆಗೆ ಹೋಗುವ ಬದಲು ಮಾರು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ದೇವರು ಮಾತನಾಡಿ, ಬರೀ ಋಣಾತ್ಮಕವಾಗಿ ಮಾತನಾಡುವುದನ್ನು ಬಿಟ್ಟು ನಮ್ಮ ರೈತರು ಸ್ವಾವಲಂಬನೆ ಸಾಧಿಸಲು ಆಗಬೇಕಿರುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದಾಗ ಮಾತ್ರ ರೈತರು ಸಬಲರಾಗಲು ಸಾಧ್ಯವಿದೆ. ನಮ್ಮ ಭಾಗದ ರೈತರು ಸಾಲ ಮನ್ನಾ ಮಾಡುವುದರ ಮುಖ ನೋಡದೇ ಸ್ವಾವಲಂಬನೆ ಸಾಧಿಸುವತ್ತ ಯೋಚಿಸಬೇಕು ಎಂದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ಬ್ಯಾಂಕಿಗೆ ಷೇರುದಾರರು, ಠೇವಣಿದಾರರೇ ಮಾಲೀಕರು. ಆಡಳಿತ ಮಂಡಳಿಯವರು, ಸಹಕಾರ ಸಂಘದವರು ಕೇವಲ ಗ್ರಾಹಕರು, ಬ್ಯಾಂಕ್‍ಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿಕೊಂಡು ಹೋಗುವವರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಅದು ದೇವರ ಕೆಲಸ ಎಂದು ಮಾಡಬೇಕು ಎಂದರು.
ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ, ಕೃಷಿಮಿತ್ರ ಸಹಕಾರಿ ಸಂಘದ ಅಧ್ಯಕ್ಷ ಭೀಮಸಿ ಹೂಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಗಿರಿಜಾ ಕಡಿ, ಸರೋಜಾ ಕೋರಿ, ಬಸನವ ಬಾಗೇವಾಡಿ ವೈದ್ಯಾಧಿಕಾರಿ ಡಾ.ಬಿ.ವೈ.ಮುತ್ತತ್ತಿ, ಡಾ.ಎಚ್.ಎಂ.ನಾಟೇಕಾರ ಮಾತನಾಡಿದರು.
ಉದ್ಯಮಿ ಶರಣು ಸಜ್ಜನ, ಗಣ್ಯರಾದ ಎಚ್.ಟಿ.ಬಿರಾದಾರ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಲ್.ಎಚ್.ರಾಠೋಡ, ಸಂಘದ ಉಪಾಧ್ಯಕ್ಷ ತಿಪ್ಪಣ್ಣ ರಾಮೋಡಗಿ,ಯಶಸ್ವಿನಿ ಮಹಿಳಾ ಸಂಘದ ಅಧ್ಯಕ್ಷೆ ಸಿದ್ದಮ್ಮ ಒಣರೊಟ್ಟಿ, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಬಸಯ್ಯ ಮಠ,ಶರಣು ಬಳೂತಿ, ಮಹ್ಮದ ರಫೀಕ ನಾಡಗೇರ, ಬಸಲಿಂಗಪ್ಪ ಹೂಗಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.