ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕುಳಿ ಸ್ಪರ್ಧೆ: ಭೀಮುಗೆ ಬಹುಮಾನ

Last Updated 23 ಆಗಸ್ಟ್ 2022, 16:17 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಈಶ್ವರ ಹಾಗೂ ಮಾರುತಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಓಕುಳಿ ಸ್ಪರ್ಧೆ ನಡೆಯಿತು.

ಓಕುಳಿ ಏರುವ ಸ್ಪರ್ಧೆಯಲ್ಲಿ ಸತತ 8ನೇ ಬಾರಿ ಕಂಬ ಏರುವ ಮೂಲಕ ತಳವಾರ ಸಮುದಾಯದ ಯುವಕರು ದಾಖಲೆ ಬರೆದರು.

ಅಂದಾಜು 40 ಅಡಿ ಎತ್ತರದ ಓಕುಳಿ ಕಂಬಕ್ಕೆ ಗೋಧಿ, ಮೈದಾ, ಹಿಟ್ಟಿನ ಕನಕವನ್ನು ನೀರಿನಲ್ಲಿ ನೆನೆಸಿ ಸವರಲಾಗಿತ್ತು. ಅಲ್ಲದೆ, ಹುಣಸೆ ಹಣ್ಣಿನ ಗೊಜ್ಜು ಹಾಗೂ ತುಪ್ಪ ಸವರುವ ಮೂಲಕ ಕಂಬ ಏರಲು ಹರಸಾಹಸ ಪಡುವಂತೆ ಮಾಡಲಾಗಿತ್ತು.

ಸಾಹಸ ಮೆರೆದ ಸ್ಪರ್ಧಾಳು ಭೀಮು ತಳವಾರಗೆ ₹20 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT