ಮಂಗಳವಾರ, ಅಕ್ಟೋಬರ್ 27, 2020
24 °C

ವಿಜಯಪುರ ಜಿಲ್ಲೆಯಲ್ಲಿ ವೈರಲ್ ಆಗಿದೆ ರೈತರ ಸಂಕಷ್ಟ ಬಿಂಬಿಸುವ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟದ ರೈತ ಸಮುದಾಯ ತತ್ತರಿಸಿ ಹೋಗಿದೆ. ರೈತರ ಸಂಕಷ್ಟ ಪರಿಸ್ಥಿತಿಯನ್ನು ಹಾಡಿನ ರೂಪದಲ್ಲಿ ಹಂಚಿಕೊಂಡಿರುವ ವಿಡಿಯೊ ವಿಜಯಪುರ ಜಿಲ್ಲೆಯ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೈತರೊಬ್ಬರು ಕಬ್ಬಿನ ಹೊಲದಲ್ಲಿ ನಿಂತು ರೈತರ ಗೋಳಿನ ಕಥೆಯನ್ನು ಜಾನಪದ ಶೈಲಿಯಲ್ಲಿ ಮನಮುಟ್ಟುವಂತೆ ಹಾಡಿದ್ದಾರೆ.

'ರೈತರ ಈ ಗೋಳ...
ಕೇಳುವವರಾರಿಲ್ಲ..
ಈ ಜಗದೊಳ....
ರೈತ ಏನ ಮಾಡಿದಾನ ತಪ್ಪಾ...
ಯಾವ ದೇವರದೈತೊ ಶಾಪಾ...'

ಎಂಬ ಈ ರೈತ ಗೀತೆಯಲ್ಲಿ ಮಳೆಯಿಂದ ಆಗಿರುವ ಬೆಳೆಹಾನಿಯ ಜೊತೆಗೆ ಸರ್ಕಾರ ಸ್ಪಂದಿಸದೇ ಇರುವ ಬಗ್ಗೆ ಸಿಟ್ಟು... ದೇವರ ಬಗ್ಗೆ ಕೋಪವೈ ಅಭಿವ್ಯಕ್ತಿಗೊಂಡಿದೆ.

ಹಾಡಿರುವ ರೈತ ಯಾರು, ಯಾವ ಊರು ಎಂಬುದು ತಿಳಿದುಬಂದಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು