ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ಆರು ಲಕ್ಷ ಸಸಿಗಳ ವಿತರಣೆ

ಆಲಮಟ್ಟಿಯ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆ ಸಜ್ಜು
Published 4 ಜೂನ್ 2023, 23:44 IST
Last Updated 4 ಜೂನ್ 2023, 23:44 IST
ಅಕ್ಷರ ಗಾತ್ರ

ಚಂದ್ರಶೇಖರ ಕೋಳೇಕರ

ಆಲಮಟ್ಟಿ: ಉತ್ಕೃಷ್ಠ ಗುಣಮಟ್ಟದ 160ಕ್ಕೂ ವಿವಿಧ ಜಾತಿಯ 6 ಲಕ್ಷಕ್ಕೂ ಅಧಿಕ ಸಸಿಗಳ ವಿತರಣೆಗೆ ಆಲಮಟ್ಟಿಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆ ಸಜ್ಜಾಗಿದೆ.

2015 ರಿಂದ ಪ್ರತಿ ವರ್ಷ 10 ಲಕ್ಷ ಸಸಿಗಳನ್ನು ಬೆಳೆಸಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಂಪರೆ ಇಲ್ಲಿ ಆರಂಭಗೊಂಡಿತು. ಅವಳಿ ಜಿಲ್ಲೆಯಲ್ಲಿ ಹೆಚ್ಚೆಚ್ಚು ಮರಗಳು ಬೆಳೆಯಲಿ ಎನ್ನುವ ಉದ್ದೇಶ ಇದರ ಹಿಂದೆಯಿತ್ತು.
ಈ ಬಾರಿ ದರ ಹೆಚ್ಚಳದ ಕಾರಣ ಸಸಿಗಳ ಬೆಳೆಸುವಿಕೆಯೂ ಕಡಿಮೆಯಾಗಿದೆ.

ಅರಣ್ಯ ಸಸಿಗಳ ಜತೆ ಹಣ್ಣು, ಅಲಂಕಾರಿಕ, ಔಷಧೀಯ, ತೋಟಗಾರಿಕೆ, ಕೃಷಿ, ಧಾರ್ಮಿಕ ಮಹತ್ವದ ಸಸಿಗಳು ಸೇರಿ ನಾನಾ 176 ಕ್ಕೂ ಅಧಿಕ ಜಾತಿಯ ಗುಣಮಟ್ಟದ, ರೋಗಾಣುರಹಿತ ಸಸಿಗಳು ದೊರೆಯುವುದರಿಂದ ಬೇಡಿಕೆ ಹೆಚ್ಚಿದೆ.
ದಿನದಿಂದ ದಿನಕ್ಕೆ ಇಲ್ಲಿಯ ಸಸಿಗಳ ಬೇಡಿಕೆ ಹೆಚ್ಚಾಗಿದೆ. ರಾತ್ರಿಯಿಡಿ ಸರದಿಯಲ್ಲಿ ಕಾಯ್ದು ಇಲ್ಲಿಯ ಸಸಿಗಳನ್ನು ರೈತರು ಒಯ್ಯುತ್ತಾರೆ.

ಸಸಿಗಳನ್ನು ದೇಶದ ನಾನಾ ನರ್ಸರಿಗಳಿಂದ ತರಿಸಿ ಇಲ್ಲಿ ಬೆಳೆಸಲಾಗುತ್ತಿದೆ. ಮಣ್ಣು, ಗೊಬ್ಬರ, ಗೋಮೂತ್ರ ಸೇರಿ ವಿಶೇಷ ಆರೈಕೆಯೊಂದಿಗೆ ಇಲ್ಲಿ ಸಸಿಗಳನ್ನು ಬೆಳೆಸಿದ ಕಾರಣ ಉತ್ಕೃಷ್ಠ ಗುಣಮಟ್ಟದ ಸಸಿಗಳಾಗಿವೆ ಎಂದು ಆರ್ ಎಫ್ ಎಓ ಮಹೇಶ ಪಾಟೀಲ ಹೇಳಿದರು.

ಟೋಕನ್ ವ್ಯವಸ್ಥೆ:

ಆಲಮಟ್ಟಿಯಲ್ಲಿ ಮೂರು ನರ್ಸರಿಗಳಿದ್ದು, ನಿತ್ಯ ಮೂರು ನರ್ಸರಿಗಳಿಂದ ತಲಾ 30 ಜನ ರೈತರಿಗೆ ಮಾತ್ರ ಸಸಿಗಳನ್ನು ವಿತರಿಸಲಾಗುತ್ತದೆ, ನಿಗದಿಪಡಿಸಿದ ದಿನದಂದು ರೈತರು ವಾಹನಗೊಂದಿಗೆ ಆಗಮಿಸಿ ಸಸಿಗಳನ್ನು ಪಡೆಯಬೇಕು, ಟೋಕನ್ ಪಡೆದವರಿಗೆ ಮಾತ್ರ ಸಸಿಗಳನ್ನು ನೀಡಲಾಗುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ತಿಳಿಸಿದರು.

ಪ್ರತಿ ರೈತರಿಗೆ ಗರಿಷ್ಠ 500 ಸಸಿಗಳನ್ನು ಮಾತ್ರ ವಿತರಿಸಲಾಗುತ್ತದೆ. ರೈತರು ಜಮೀನಿನ ಪಹಣಿಪತ್ರ, ಆಧಾರ್‌ ಕಾರ್ಡ್, ಜಿಪಿಎಸ್ ರೀಡಿಂಗ್ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸಸಿಗಳ ಬೆಲೆ ಗಣನೀಯ ಹೆಚ್ಚಳ:

ಈ ಬಾರಿ ಅರಣ್ಯ ಇಲಾಖೆಯ ಸಸಿಗಳ ಬೆಲೆ ಹೆಚ್ಚಳವಾಗಿವೆ. 6X9 ಅಳತೆಯ ಸಸಿಗೆ ₹6, 8X12 ಅಳತೆಯ ಪ್ರತಿ ಸಸಿ ₹23, 8X12 ಅಳತೆಯ ಕಸಿ ಕಟ್ಟಿದ ಪ್ರತಿ ಸಸಿಗೆ ₹76, 10X16 ಅಳತೆಯ ಸಸಿಗೆ ₹72, 10X16 ನಾಟಿ ಮಾಡಿದ ಪ್ರತಿ ಸಸಿಗೆ ₹147, 14X20 ಅಳತೆಯ ಸಸಿಗೆ ₹197, 25X25 ಅಳತೆಯ ಪ್ರತಿ ಸಸಿಗೆ ₹734 ದರ ನಿಗದಿ ಮಾಡಲಾಗಿದೆ.

ಶೀಘ್ರವೇ ನಿರ್ಧಾರ:

ವಿತರಣೆಯ ದಿನಾಂಕವನ್ನು ಶೀಘ್ರವೇ ನಿರ್ಧರಿಸಲಾಗುವುದು, ಈ ಭಾಗದ ಶಾಸಕರೂ ಆದ ಸಚಿವ ಶಿವಾನಂದ ಪಾಟೀಲ ಸಸಿಗಳ ವಿತರಣೆಗೆ ಚಾಲನೆ ನೀಡಲಿದ್ದಾರೆ. ಆದರೆ, ದಿನ ಇನ್ನೂ ನಿಗದಿಯಾಗಿಲ್ಲ ಎಂದು ಡಿಎಫ್ ಓ ರಾಜಣ್ಣ ನಾಗಶೆಟ್ಟಿ ತಿಳಿಸಿದರು.

ಹೆಚ್ಚಿನ ವಿವರಗಳಿಗೆ ಸತೀಶ ಗಲಗಲಿ 9916604399, ವಿಜಯಲಕ್ಷ್ಮಿ ರೆಡ್ಡಿ 8105338247, ಅಶೋಕ ಕಾಳೆ 9606557133 ಇವರನ್ನು ಸಂಪರ್ಕಿಸಬಹುದು.

- ಸಸಿಗಳು ಎಲ್ಲೆಲ್ಲಿ ಲಭ್ಯ?  ಆಲಮಟ್ಟಿಯ ಡ್ಯಾಂ ಸೈಟ್ ನರ್ಸರಿ ಆಲಮಟ್ಟಿಯ ಎಂಡಿಎಫ್ ನರ್ಸರಿ  ಆಲಮಟ್ಟಿಯ ಎಎಲ್ ಬಿಸಿ ನರ್ಸರಿ ರೋಡಲ್ ಬಂಡಾ (ರಾಯಚೂರು ಜಿಲ್ಲೆ)ದ ಬಸವಸಾಗರ ನರ್ಸರಿ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ನರ್ಸರಿ  ಹಿರೇಜಾವೂರ ನರ್ಸರಿ (ನಾರಾಯಣಪುರ)

ಲಭ್ಯವಿರುವ ಪ್ರಮುಖ ಸಸಿಗಳು 1)ತೋಟಗಾರಿಕಾ ಮತ್ತು ಹಣ್ಣಿನ ಸಸಿಗಳು:- ಹುಣಸೆ ನೇರಳೆ ಮಾವು ಹಲಸು ವಿವಿಧ ತಳಿಗಳ ಪೇರು ದಾಳಿಂಬೆ ಚಿಕ್ಕು ನಿಂಬೆ ಅಂಜೂರ ರಾಮಫಲ ಇತ್ಯಾದಿ 2) ಕೃಷಿ ಅರಣ್ಯ ಮತ್ತು ವಾಣಿಜ್ಯ ಬೆಳೆಗಳು:- ಶ್ರೀಗಂಧ ಮಹಾಗನಿ ರಕ್ತಚಂದನ ಹೆಬ್ಬೇವು ಸಾಗವಾನಿ ಗಾಳಮರ 3) ಅರಣ್ಯ: ಬೇವು ಹೊಂಗೆ ಆಲ ಬಸರಿ...ಇತ್ಯಾದಿ 4) ಅವೆನ್ಯೂ ಜಾತಿಯ ಸಸಿಗಳು: ಹೊಳೆ ದಾಸವಾಳ ಕದಂಬ ಟಬೂಬಿಯಾ ಹೊಳೆ ಮತ್ತಿ ಬದಾಮ ಮುತ್ತುಗ ಸಂಕೇಶ್ವರ ಇತ್ಯಾದಿ 5) ಪಾಮ ಹಾಗೂ ಅಲಂಕಾರಿಕ ಸಸಿಗಳು: ಅರೆಕಾ ಪಾಮ ಬಗಿನಿ ಪಾಮ ಟೇಬಲ್ ಪಾಮ್ ಕ್ರೋಟಾನ್ಸ್ ಪೆಟ್ರಾ ಪೈಕಸ್ 6) ಹೂವಿನ ಗಿಡಗಳು: ಬೋಗನವಿಲ್ಲಾ ದಿನಕಾ ರಾಜಾ ನಂದಿ ಬಟ್ಲು ಕಣಗಲ ಕ್ಯಾಶಿಯಾ ಜಟ್ರೋಪಾ ಇತ್ಯಾದಿ 7)) ಧಾರ್ಮಿಕ ಪ್ರಾಮುಖ್ಯತೆಯ ಗಿಡಗಳು: ತುಳಸಿ ಬನ್ನಿ ಪತ್ರಿ ನಂದಿಪಾದ (ಆರೆ) ನಾಗಲಿಂಗ ಪುಷ್ಪ ದೇವಕಣಗಿಲೆ ಹಾಗೂ ಇತ್ಯಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT