ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ- ಗುರುಪ್ರಸಾದ ಸ್ವಾಮೀಜಿ

ಎ.ಸಿ.ಟಿ. ಶಾರದಾ ಪಬ್ಲಿಕ್ ಶಾಲೆ ನೂತನ ಕಟ್ಟಡಕ್ಕೆ ಭೂಮಿಪೂಜೆ
Last Updated 7 ಜನವರಿ 2022, 15:29 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಒಳ್ಳೆಯ ಸಂಸ್ಕಾರ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬೈರವಾಡಗಿ-ಮೈಗೂರ ಗುರುದೇವ ಆಶ್ರಮದ ಗುರುಪ್ರಸಾದ ಸ್ವಾಮೀಜಿ ಹೇಳಿದರು.

ನಗರದ ಎ.ಸಿ.ಟಿ ಶಾರದಾ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಭೂಮಿಪೂಜೆ ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆವಿಶ್ವದಲ್ಲಿ ಹೆಸರು ಗಳಿಸಿದ ಹಾಗೆ ನಮ್ಮ ನಾಡಿನಲ್ಲಿ ಶಾರದಾ ಪಬ್ಲಿಕ್ ಶಾಲೆಯು ಕೀತಿ ಗಳಿಸಬೇಕು. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದಿ ಉನ್ನತ ಸ್ಥಾನ ಹೊಂದಲಿ ಎಂದರು.

ಚಿತ್ರದುರ್ಗದ ವನಸಿರಿ ಮಠದ ಡಾ. ಜಯಬಸವಕುಮಾರ ಸ್ವಾಮಿ, 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಗಳು ನಡೆದ ಮಾದರಿಯಲ್ಲಿಇಂದು ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ಮನಸ್ಸು, ಮನತುಂಬುವ ಹಾಗೆ ಅದ್ಭುತವಾದ ಶೈಕ್ಷಣಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡಿ ವಿದ್ಯಾರ್ಥಿಗಳ ಶಿಸ್ತು, ಸಹನೆ ನೋಡಿ ಆನಂದವಾಯಿತು ಎಂದು ಹೇಳಿದರು.

ನೂತನ ಶಾಲೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದಸಜ್ಜನ ಗಾಣಿಗೇರ ಸೇವಾ ಸಂಘದ ಅಧ್ಯಕ್ಷ ಸಂ .ಗು. ಸಜ್ಜನ, ವಿದ್ಯಾರ್ಥಿಗಳಿಗೆ ಅಕ್ಕರೆಯಿಂದಜ್ಞಾನವನ್ನು ಉಣಬಡಿಸಿ, ನಡೆದಾಡುವ ದೇವರ ಆಸೆವನ್ನು ಸಾಕ್ಷಾತಕಾರ ಮಾಡುವುದೇ ನಮ್ಮ ಸಂಘದ ಗುರಿ ಎಂದರು.

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಟ್ಟಡದ ಭೂಮಿಪೂಜೆ ನಡೆಯಿತು.ಚೇರ್ಮನ್‍ ಡಾ ಗುರುರಾಜ ಕರಜಗಿ,ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ. ಎಸ್. ಸಜ್ಜನ,ಉಪಾಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಜಂಟಿ ಕಾರ್ಯದರ್ಶಿ ಅಶೋಕ ಸಜ್ಜನ, ಖಜಾಂಚಿ ರಾಜಶೇಖರ ಸಜ್ಜನ, ನಿರ್ದೇಶಕರಾದ ಅಪ್ಪಾಸಾಹೇಬ ಸಿ. ಸಜ್ಜನ, ಮುರಿಗೆಪ್ಪ ಎಸ್. ಸಜ್ಜನ, ಡಾ.ರಾಮಣ್ಣ ಸಜ್ಜನ, ಲಕ್ಷ್ಮಣಸಜ್ಜನ, ಶ್ರೀಶೈಲ ಸಜ್ಜನ, ವಿವೇಕಾನಂದಸಜ್ಜನ, ಸೋಮಶೇಖರ್ ಎಸ್. ಸಜ್ಜನ, ಜಿಮೇಶ ಪೌಲ್, ಎಸ್.ವಿ.ಕುಲಕರ್ಣಿ, ನಿತೀನ್‌ ರುಣವಾಲ, ಡಾ.ಮುನೀರ ಬಾಂಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT