ವಿಜಯಪುರ: ‘ಕಾವ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ, ಕಾವ್ಯ ರಚನೆ ಕಠಿಣವಾದ ಕೆಲಸ, ಕಾವ್ಯ ರಚನೆಗೆ ಶಬ್ದ ಸಂಗ್ರಹ, ಶಬ್ದಗಳ ಅರಿಕೆ ಮತ್ತು ಸಂದರ್ಭಾನುಸಾರ ಕಾವ್ಯದಲ್ಲಿ ಅವುಗಳ ಬಳಸಿಕೊಳ್ಳುವುದು ಗೊತ್ತಿರಬೇಕಾಗುತ್ತದೆ’ ಎಂದು ತ್ರಿಭಾಷ ಸಾಹಿತಿ ಜಿ.ಆರ್. ಕುಲಕರ್ಣಿ ಹೇಳಿದರು.

ನಗರದ ದೀವಟಗೇರಿ ರಾಯರ ಮಠದಲ್ಲಿ ರವಿವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರೊ. ಚಿದಂಬರ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಸಾಹಿತ್ಯಗಳ ಬಗ್ಗೆ ಸಂಶೋಧನೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ರೇಖಾ ಮುತಾಲಿಕ ಅವರ ಕಥಾ ಕುಸುಮಗಳು ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಪ್ರಭಾಕ ಖೇಡದ ಹಾಗೂ ರೇಖಾ ಗೋಗಿ ಪುಸ್ತಕವನ್ನು ಪರಿಚಯಿಸಿದರು.

ಅಭಾಸಾಪ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕವನ ಸ್ಪರ್ಧೆ ವಿಜೇತರಿಗೆ ಪುಸ್ತಕ ಬಹುಮಾನ ಕೊಡಲಾಯಿತು. ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.

ವಿವೇಕ ಕುಲಕರ್ಣಿ, ಶ್ರೀರಂಗ ಕುಲಕರ್ಣಿ, ಗಂಗಾಧರ ಪವಾಡ ಶೆಟ್ಟಿ, ಖುಷಿ, ಮಯೂರ ತಿಳಗೂಳಕರ, ಸುಕಾಂತ ಕುಲಕರ್ಣಿ, ಬಳವಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.