ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರ ಪ್ರತಿರೂಪ ಹಡಪದ ಅಪ್ಪಣ್ಣ: ವೈ.ಎಸ್. ಪಾಟೀಲ

Last Updated 7 ಜುಲೈ 2020, 13:27 IST
ಅಕ್ಷರ ಗಾತ್ರ

ವಿಜಯಪುರ: ಶಿವಶರಣ ಹಡಪದ ಅಪ್ಪಣ್ಣ ಅವರ ಕಾರ್ಯ ವೈಕರಿ ಬಸವಣ್ಣನವರ ಪ್ರತಿರೂಪವಾಗಿ ಕಾಣಬಹುದಾಗಿದೆ. ಅವರು ಕಾಯಕದ ಮೂಲಕವೇ ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾಗಿ ಇಂದಿಗೂ ಅಚ್ಚಳಿಯದೆ ನೆಲೆಯೂರಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು.

12ನೇ ಶತಮಾನದ ಶರಣರು ನಮ್ಮೆಲ್ಲರಿಗೆ ದಾರಿ ದೀಪವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲರು ಸಾಗಬೇಕಿದೆ. ಶರಣರು ಜಾತಿ-ಧರ್ಮವನ್ನು ಮೀರಿದವರಾಗಿದ್ದಾರೆ. ಹೀಗಾಗಿ ಶರಣರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಡದೆ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜದ ಮುಖಂಡರಾದ ಬಸವರಾಜ ಶಿವಶರಣರ, ಶಿವಾನಂದ ತೊರವಿ, ಜಿ.ಎಸ್.ಕಟ್ಟಿ, ವಿಠ್ಠಲ ನಾವಿ, ನರಸು ಜುಮನಾಳ, ಅಶೋಕ ನಾವಿ, ರಾವತು ಸವನಳ್ಳಿ, ಬಸವರಾಜ ಬಿಸನಾಳ, ರಮೇಶ ಇಳಕಲ್, ಸಿದ್ದಪ್ಪ ಹಡಪದ, ಚಂದ್ರಕಾಂತ ಹಡಪದ, ಸೋಮನಗೌಡ ಕಲ್ಲೂರ, ಭೀಮರಾವ್ ಜಿಗಜಿಣಿಗಿ, ಅಡಿವೆಪ್ಪ ಸಾಲಗಲ್, ಮಂಜುಳಾ ಸಾಲಗಲ್, ನಾಗರತ್ನ, ಫಯಾಜ್ ಕಲಾದಗಿ, ಗಿರೀಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT