ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿನದತ್ತ ದೇಸಾಯಿ, ನಾ.ಮೊಗಸಾಲೆಗೆ ಹಲಸಂಗಿ ಕಾವ್ಯ ಪ್ರಶಸ್ತಿ

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಪ್ರಕಟ
Last Updated 23 ನವೆಂಬರ್ 2020, 18:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2019 ಮತ್ತು 2020ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಎಂಟು ಜನ ಹಿರಿಯ ಮತ್ತು ಕಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.

2019ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಜಿನದತ್ತ ದೇಸಾಯಿ, ಸಂಶೋಧನೆಗಾಗಿ ಮೈಸೂರಿನ ಡಾ.ವೈ.ಸಿ. ಭಾನುಮತಿ, ಜಾನಪದ ಸಾಹಿತ್ಯಕ್ಕೆ ಮಂಡ್ಯದ ಡಾ.ರಾಮೇಗೌಡ ಹಾಗೂ ಯುವ ಪ್ರಶಸ್ತಿಗೆ ಕದ್ರಾದ ಅಕ್ಷತಾ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

2020ನೇ ಸಾಲಿನ ಕಾವ್ಯ ಕ್ಷೇತ್ರದ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ, ಸಂಶೋಧನೆ ಗಾಗಿ ಧಾರವಾಡದ ಡಾ.ಗುರುಲಿಂಗ ಕಾಪಸೆ, ಜಾನಪದ ಸಾಹಿತ್ಯಕ್ಕಾಗಿ ಬಾಗಲಕೋಟೆ ಜಿಲ್ಲೆ ಬೀಳಗಿಯ ಡಾ.ಶ್ರೀರಾಮ ಇಟ್ಟಣ್ಣನವರ ಹಾಗೂ ಯುವ ಪ್ರಶಸ್ತಿಗೆ ಧಾರವಾಡದ ಟಿ.ಎಸ್. ಗೊರವರ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯು ಹಿರಿಯ ಸಾಹಿತಿಗಳಿಗೆ ₹ 51 ಸಾವಿರ ಹಾಗೂ ಕಿರಿಯ ಸಾಹಿತಿಗಳಿಗೆ ₹ 25 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಡಾ.ಜಿ.ಎಂ.ಹೆಗಡೆ, ಡಾ.ಬಾಳಣ್ಣ ಸೀಗಿಹಳ್ಳಿ ಹಾಗೂ ಡಾ.ಗುರುಪಾದ ಮರಿಗುದ್ದಿ ಅವರನ್ನು ಒಳಗೊಂಡ ಸಾಹಿತ್ಯ ಆಯ್ಕೆ ಸಮಿತಿಯು ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ಪ್ರದಾನಸಮಾರಂಭದ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ಹಲಸಂಗಿ ಗೆಳೆಯರ ಪ್ರತಿಷ್ಠಾನದ ಅಧ್ಯಕ್ಷರೂ ಆದ ವಿಜಯಪುರಜಿಲ್ಲಾಧಿಕಾರಿ ಪಿ.ಸುನೀಲಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT