ಗುರುವಾರ , ಅಕ್ಟೋಬರ್ 28, 2021
19 °C

ಶ್ರವಣ ದೋಷ:ಮುನ್ನೆಚ್ಚರಿಕೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶ್ರವಣ ದೋಷವುಂಟಾಗದಂತೆ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಮೂಢನಂಬಿಕೆಗಳಿಗೆ ಒಳಗಾಗದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ಎಂದು ಬಿ.ಎಲ್.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ  ಉಪಕುಲಪತಿ ಡಾ. ಆರ್.ಎಸ್.ಮುಧೋಳ ಹೇಳಿದರು.

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿವುಡುತನದ ಬಗ್ಗೆ ಚಿಕಿತ್ಸಾ ಜಾಗೃತಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತು  ಕೊರೊನಾದಿಂದ ನಲುಗಿದಾಗ ಎಂ.ಬಿ.ಪಾಟೀಲರು ಮಾನವೀಯತೆ ಮೆರೆದು ನಮ್ಮ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲ ಕಲ್ಪಿಸಿದ್ದಾರೆ. ವಾಕ್, ಶ್ರವಣ ತಜ್ಞರು 24 ಗಂಟೆ ಆಸ್ಪತ್ರೆಯ ಕೊಠಡಿ ಸಂಖ್ಯೆ 9 ಒ.ಪಿ.ಡಿ ಲಭ್ಯವಿದ್ದು, ಅತ್ಯಾಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಹಿರಿಯ ನಾಗರಿಕರಲ್ಲಿ ಕಂಡು ಬರುವಂತಹ ಕಿವುಡುತನ ಕುಟುಂದವರೊಂದಿಗೆ ಹಾಗೂ ಸಾಮಾಜಿಕವಾಗಿ ಬೆರೆಯಲು ಶ್ರವಣ ಸಾಧನಗಳು ಅತ್ಯಾವಶ್ಯಕ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಾಕ್, ಶ್ರವಣ ವಿಭಾಗದಲ್ಲಿ ಲಭ್ಯವಿರುವ ಆಧುನಿಕ ಉಪಕರಣಗಳು ಮತ್ತು ನೆರವುಗಳ ಬಗ್ಗೆ ಕೈಪಿಡಿ ಬಿಡುಗಡೆ ಮಾಡಿದರು.

ವಿಭಾಗ ಮುಖ್ಯಸ್ಥೆ ಡಾ. ಎಚ್.ಟಿ.ಲತಾದೇವಿ ಅವರು ಕಿವುಡುತನದ ರಕ್ಷಣೆಯ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಶ್ರವಣ ದೋಷದ ಕಾರಣಗಳು, ಜನ್ಮಜಾತ ಶಿಶುಗಳಿಗೆ ತಕ್ಷಣ ಚಿಕಿತ್ಸೆ ಕೊಡುವುದು, ವಯಸ್ಕರಲ್ಲಿ, ಹಿರಿಯ ನಾಗರಿಕರಲ್ಲಿ ಕಿವುಡುತದ ಕುರಿತು ತಿಳಿಸಿದರು.

ವೈದ್ಯಕೀಯ ಅಧೀಕ್ಷಕ ಡಾ.ಆರ್.ಎಂ.ಹೊನ್ನುಟಗಿ, ಜಿರಿಯಾಟ್ರಿಕ್ ಕ್ಲಿನಿಕ್ ಪ್ರಾಧ್ಯಾಪಕ ಡಾ.ಆನಂದ ಅಂಬಲಿ, ಜಿಲ್ಲಾ ಅಂಗವಿಕಲರ ಪುನರ್ ವಸತಿ ಕೇಂದ್ರ ನೋಡಲ್ ಅಧಿಕಾರಿ ಡಾ. ಈಶ್ವರ ಭಾಗೋಜಿ, ಡಾ. ನಿತೀನ ಭಟ್, ಡಾ.ಶಶಿಕುಮಾರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.