ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಎರಡು ದಿನಗಳ ಕಾಲ ಉತ್ತಮ ಮಳೆಯಾಗಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ವರೆಗೆ ಹಲವೆಡೆ ಜಿಟಿಜಿಟಿ ಮಳೆಯಾಯಿತು.
ಮಳೆ ನೀರು ತಗ್ಗು ಪ್ರದೇಶ, ಹೊಲಗಳಲ್ಲಿ ನಿಂತಿದ್ದ ಹಾಗೂ ಹಳ್ಳಗಳು ತುಂಬಿ ಹರಿಯುವ ದೃಶ್ಯ ಕಂಡುಬಂದಿತು. ಬೆಳಿಗ್ಗೆ ಸುರಿದ ಮಳೆಯ ಪರಿಣಾಮ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ, ವಹಿವಾಟಿಗೆ ಅಡಚಣೆಯಾಯಿತು. ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.
ವಿಜಯಪುರ ನಗರದಲ್ಲಿ ಗರಿಷ್ಠ ಅಂದರೆ, 20.4 ಮಿ.ಮೀ. ಮಳೆಯಾಗಿದೆ. ಹಿಟ್ನಳ್ಳಿ 18.2,ಇಂಡಿ 16.5, ಭೂತನಾಳ 13.2, ನಾಗಠಾಣ 12.3, ತಿಕೋಟಾ 12.2,ಮನಗೂಳಿ 11, ಹೊರ್ತಿ 10.2, ಝಳಕಿ 10.4, ಆಲಮೇಲ 15, ಸಾಸಾಬಾಳ 11.2, ರಾಮನಹಳ್ಳಿ 11.6, ಅಗರಖೇಡ 13.2, ಚಡಚಣ 9.4,ಬಸವನ ಬಾಗೇವಾಡಿ 6.6,ಆಲಮಟ್ಟಿ 2.2, ಹೂವಿನ ಹಿಪ್ಪರಗಿ 4.4, ಅರೇಶಂಕರ 2,ಮಟ್ಟಿಹಾಳ 4, ಕುಮಟಗಿ 3.8, ಕನ್ನೂರ 4.3, ಬಬಲೇಶ್ವರ 6.4, ನಾದ ಬಿ.ಕೆ 6,ಹಲಸಂಗಿ 8, ಮುದ್ದೇಬಿಹಾಳ 3, ನಾಲತವಾಡ 5.2, ತಾಳಿಕೋಟಿ 6.2, ಢವಳಗಿ 4, ಸಿಂದಗಿ 6.2, ಕಡ್ಲೇವಾಡ 2.2, ದೇವರ ಹಿಪ್ಪರಗಿ 2.8 ಮಿ.ಮೀ. ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.