ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ವರುಣನ ಆರ್ಭಟ

ಅಗರಖೇಡ 6.5, ಹಲಸಂಗಿ 5.6 ಸೆಂ.ಮೀ.ಅಧಿಕ ಮಳೆ
Last Updated 6 ಸೆಪ್ಟೆಂಬರ್ 2021, 13:10 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಭಾರೀ ಮಳೆ ಸುರಿಯತೊಡಗಿದೆ. ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ ಎಡಬಿಡದೆ ಸುರಿಯತೊಡಗಿದ್ದು, ಇಡೀ ಜಿಲ್ಲೆ ಮಳೆನಾಡಿನಂತಾಗಿದೆ.

ವಿಜಯಪುರ, ಬಸವನ ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ತಿಕೋಟಾ, ಬಬಲೇಶ್ವರ, ಹೊರ್ತಿ, ಕೊಲ್ಹಾರ, ಇಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗತೊಡಗಿದೆ.

ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಭಾರೀ ಮಳೆಯಿಂದ ಸಹಜ ಜನ ಜೀವನಕ್ಕೆ ಅಡಚಣೆಯಾಯಿತು.

ಜಿಲ್ಲೆಯಲ್ಲಿ ಇನ್ನೂ ಎರಡರಿಂದ ಮೂರು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ವಿವರ:

ಅಗರಖೇಡದಲ್ಲಿ ಅತೀ ಹೆಚ್ಚು ಅಂದರೆ, 6.5 ಸೆಂ.ಮೀ. ಮಳೆಯಾಗಿದೆ. ಹಲಸಂಗಿ 5.6, ಕನ್ನೂರ 5, ರಾಮನಹಳ್ಳಿ 4.8, ಮಮದಾಪೂರ 4.1, ದೇವರಹಿಪ್ಪರಗಿ 4.7,ಹೋರ್ತಿ 3.8,ಭೂತನಾಳ 3.8,ಇಂಡಿ 3.8,ವಿಜಯಪುರ 2.7, ಬಸವನ ಬಾಗೇವಾಡಿ 1.6, ಮನಗೂಳಿ 3.2, ಹೂವಿನ ಹಿಪ್ಪರಗಿ 1.2, ಮಟ್ಟಿಹಾಳ 1.7, ಹಿಟ್ನಳ್ಳಿ 2.1, ತಿಕೋಟಾ 2.2, ಕುಮಟಗಿ 2.1, ಬಬಲೇಶ್ವರ 1.6, ನಾದ ಬಿ.ಕೆ. 2.4, ಚಡಚಣ 1.8, ಝಳಕಿ 1.6, ಸಿಂದಗಿ 2.6, ಆಲಮೇಲ 2.1, ಸಾಸಾಬಾಳ 1, ಕಡ್ಲೆವಾಡ 3 ಸೆಂ.ಮೀ.ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT