ಇಂಡಿ: ‘ಮಹಿಳೆಯರು ಹಿಂದೂ ಸಮಾವೇಶಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಮಕ್ಕಳನ್ನು ವೀರ ಯೋಧರಂತೆ ಬೆಳೆಸಬೇಕು’ ಎಂದು ಮೈಗೂರದ ಗುರುಪ್ರಸಾದ ಸ್ವಾಮೀಜಿ ಹೇಳಿದರು.

ನಗರದ ಸಿಂದಗಿ ರಸ್ತೆಯ ಮಂಗಲ ಕಾರ್ಯಾಲಯ ಪಕ್ಕದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಹಾಗೂ ಇಂಡಿ ನಗರ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮುಸಲ್ಮಾನರು ಪವಿತ್ರ ರಂಜಾನ್ ತಿಂಗಳಿನಲ್ಲೂ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲುಎಸೆದಿದ್ದಾರೆ. ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಗಣಪತಿ ಮೆರವಣಿಗೆಯಲ್ಲಿಯೂ ಕಲ್ಲು ತೂರಾಟ ಮಾಡಿರುವುದು ಖಂಡನೀಯ’ ಎಂದರು.

‘ರಾಜ್ಯ ಸರ್ಕಾರ ಆರ್.ಎಸ್.ಎಸ್. ಸಂಘದ ಪಥ ಸಂಚಲನ ಮಾಡಬಾರದು. ಸಂಘದ ಕಾರ್ಯ– ಕಲಾಪಗಳನ್ನು ಮುಜರಾಯಿ ಇಲಾಖೆಯ ದೇವಸ್ಥಾನಗಳ ಆವರಣದಲ್ಲಿ ನಡೆಸಬಾರದು’ ಎಂದು ಆದೇಶ ಹೊರಡಿಸಿದ್ದು ಖಂಡಿಸಿದರು.

ಹಿರೇಮಣೂರದ ಪಂ. ಸರ್ವೇಶಾಚಾರ್ಯ ಅಕಮಂಚಿ ಮಾತನಾಡಿ, ‘ಹಿಂದೂಗಳಾದ ನಾವೆಲ್ಲ ಮೊದಲು ನಮ್ಮನ್ನು ನಾವು ಸರಿ ಮಾಡಿಕೊಳ್ಳಬೇಕು. ಜಾತಿ-ಜಾತಿ ಎನ್ನದೇ ಮೊದಲು ನಾವೆಲ್ಲ ಹಿಂದೂ ಎನ್ನುವುದನ್ನು ಅರಿಯಬೇಕು’ ಎಂದರು.

ಆಂದೋಲ ಗ್ರಾಮದ ಕರುಣೇಶ್ವರಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ. ಸತ್ಯಶೋಧನಾ ಸಮಿತಿ ಹೆಸರು ಹೇಳಿಕೊಂಡು ಹಿಂದೂ ಧರ್ಮದ ಮುಖಂಡರನ್ನು, ಹಿಂದೂ ಧರ್ಮವನ್ನು ನಾಶ ಮಾಡುವ ಕಾರ್ಯ ಮಾಡಲಾಗುತ್ತಿದೆ. ಅದಕ್ಕಾಗಿ ಆ ಸಮಿತಿಯ ಸದಸ್ಯರನ್ನು ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದರು.

ಕರ್ನಾಟಕ ಉತ್ತರ ಪ್ರಾಂತ ಹಿಂದೂ ಸಮಿತಿ ಕಾರ್ಯವಾಹಕ ರಾಘವೇಂದ್ರ ಕಾಗವಾಡ ಹಿಂದೂ ಧರ್ಮದ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಭೀಮಾಶಂಕರ ಮುರಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸುಗೌಡ ಬಿರಾದಾರ, ಜಗದೀಶ ಕ್ಷತ್ರಿ, ಸಂಗಣ್ಣ ಈರಾಬಟ್ಟಿ, ಮಲ್ಲು ಗುಡ್ಲ, ಸತೀಶ ಕುಂಬಾರ, ಯಮನಾಜಿ ಸಾಳುಂಕೆ, ಲಕ್ಷ್ಮೀಕಾಂತ ಮೇತ್ರಿ, ವಿರಾಜ ಪಾಟೀಲ, ಅಜಿತ ಹಿರೇಮಠ, ಸಂತೋಶ ಗವಳಿ, ಸಂಜು ದಶವಂತ, ವಿಠ್ಠಲ ಕಂಬಾರ, ಸ್ವತಂತ್ರ ಸಿಂಧೆ, ನೇತಾಜಿ ಪವಾರ, ಪ್ರಕಾಶ ಬಿರಾದಾರ, ವಿವೇಕ ಹಂಜಗಿ, ಮಂಜು ತಮಶೆಟ್ಟಿ, ಸೋಮು ನಿಂಬರಗಿಮಠ, ಬಾಳು ಮುಳಜಿ, ಅನೀಲಗೌಡ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.