ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಮಸಳಿ: ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ

Last Updated 13 ಸೆಪ್ಟೆಂಬರ್ 2022, 13:16 IST
ಅಕ್ಷರ ಗಾತ್ರ

ವಿಜಯಪುರ:ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾಜ್ಯೋತಿ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ನಡೆಯಿತು.

1994ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಯಿಂದ ತೇರ್ಗಡೆಯಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಾದ ಆರ್.ಬಿ. ಸೌದಾಗರ ಹಾಗೂ ಬಿ.ಪಿ. ತಳವಾರ ಗುರುಗಳಿಗೆ ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಗುರುವಿನ ಕಾಲಿಗೆ ನಮಸ್ಕರಿಸುವ ಮೂಲಕಗುರುವಂದನೆ ಸಲ್ಲಿಸಿದರು.

ಶಿಕ್ಷಕ ಆರ್.ಬಿ. ಸೌದಾಗರ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕಲಿತು ತೇರ್ಗಡೆಯಾಗಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂದು ನಿವೃತ್ತಿ ಸಮಯದಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಸಾರ್ಥಕತೆ ಹಾಗೂ ಸಂತೃಪ್ತಿ ತರಿಸಿದೆ ಎಂದರು.

ಶಿಕ್ಷಕ ಬಿ.ಪಿ. ತಳವಾರ ಮಾತನಾಡಿ, ವಿದ್ಯಾರ್ಥಿಗಳ ಕಾಳಜಿ ಹಾಗೂ ಭಕ್ತಿಗೆ ಪ್ರತಿಯಾಗಿ ಅಭಿನಂದನೆ ಸಲ್ಲಿಸಿ ಶುಭಕೋರಿದರು.

ವಿದ್ಯಾರ್ಥಿನಿಯರಾದ ಮಂಗಲಾ ವಾಗಮೋರೆ ಹಾಗೂ ದ್ರಾಕ್ಷಾಯಿಣಿ ಮಾದನಶೆಟ್ಟಿ ಮಾತನಾಡಿ, ಬಾಲ್ಯದಲ್ಲಿ ಗುರುಗಳು ನೀಡಿದ ಶಿಕ್ಷಣ, ಸಂಸ್ಕಾರದಿಂದಾಗಿ ಇಂದು ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯಲು ಸಹಾಯವಾಯಿತು. ಗುರುಗಳಂತೆಯೇ ಶಿಕ್ಷಕ ವೃತ್ತಿ ಆಯ್ದುಕೊಂಡು ಸರ್ಕಾರಿ ಹುದ್ದೆ ಅಲಂಕರಿಸಿ ನೂರಾರು ಮಕ್ಕಳಿಗೆ ಪಾಠ ಮಾಡಲು ಆರ್.ಬಿ. ಸೌದಾಗರ ಹಾಗೂ ಬಿ.ಪಿ. ತಳವಾರ ಗುರುಗಳೇ ಪ್ರೇರಣೆ ಎಂದರು.

ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಅಂದು ಗುರುಗಳು ಎದೆಯಲ್ಲಿ ಬಿತ್ತಿದ ಅಕ್ಷರಗಳೇ ಇಂದು ಪತ್ರಿಕಾ ವೃತ್ತಿಯಲ್ಲಿ ಕೈಹಿಡಿದು ಮುನ್ನಡೆಸುತ್ತಿವೆ. ಅವರ ಋಣ ತೀರಿಸಲಾಗದು ಎಂದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ತಿಪ್ಪಣ್ಣ ಶಿರಕನಳ್ಳಿ, ವಿದ್ಯಾರ್ಥಿಗಳಾದ ಲಕ್ಷ್ಮಣ ಭಾವಿಕಟ್ಟಿ, ಬಸವರಾಜ ಪಟ್ಟಣಶೆಟ್ಟಿ, ಶ್ರೀಶೈಲ ಮಲಕಗೊಂಡ, ಸಂತೋಷ ದೇಗಿನಾಳ, ಶ್ರೀಶೈಲ ಮಲಕಗೊಂಡ, ಯಲ್ಲಪ್ಪ ಕ್ಷತ್ರಿ, ಶಿವಾನಂದ ಕ್ಷತ್ರಿ, ಲಕ್ಷ್ಮಿ ಪಟ್ಟಣಶೆಟ್ಟಿ, ಕವಿತಾ ಹಿಪ್ಪರಗಿ, ಶೈಲಾ ಹತ್ತಿ, ಲಕ್ಷ್ಮಿಬಾಯಿ ಉಪ್ಪಾರ, ಶಿವಲೀಲಾ, ನೀಲಮ್ಮ ಭಾವಿಕಟ್ಟಿ, ಹಾಜರಾ ಜಮಾದಾರ, ವೈಶಾಲಿ ರೊಟ್ಟಿ, ರಜಾಕ ಮುಜಾವರ, ಸತ್ತಾರ್ ಸೌದಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT