ಸೋಲಾಪುರ: ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪುತ್ರ-ಪುತ್ರಿಯರನ್ನು ಉತ್ತೇಜಿಸಿ ಶ್ರೇಷ್ಠ ಆಟಗಾರರನ್ನಾಗಿ ರೂಪಿಸಲು ಶ್ರಮಿಸುವ ಆದರ್ಶ ತಾಯಂದಿರನ್ನು ಗೌರವಿಸುವ ಉದ್ದೇಶದಿಂದ ಪಂಢರಪುರದ ಕ್ರೀಡಾ ಭಾರತಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ‘ಜೀಜಾಮಾತಾ ಪ್ರಶಸ್ತಿ ಪ್ರದಾನ’ ಸಮಾರಂಭ ಬುಧವಾರ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.

ಮಾತೃಶಕ್ತಿಯ ಗೌರವ, ಸಂಸ್ಕಾರದ ಮಹತ್ವ ಮತ್ತು ಕ್ರೀಡಾ ಸಾಧನೆಯ ಸಂಭ್ರಮವನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮವು ಪಂಢರಪುರದ ಖವಾ ಬಜಾರ್ನಲ್ಲಿರುವ ಅರ್ಬನ್ ಬ್ಯಾಂಕ್ನ ಕರ್ಮಯೋಗಿ ಸಭಾಗೃಹದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರಶಾಂತ ಡಗಲೆ, ಸಮಾಜಸೇವಕಿ ಸೀಮಾತಾಯಿ ಪರಿಚಾರಕ ಹಾಗೂ ಕ್ರೀಡಾ ಭಾರತಿ ಪಶ್ಚಿಮ ಮಹಾರಾಷ್ಟ್ರ ಪ್ರಾಂತದ ಕಾರ್ಯದರ್ಶಿ ಜ್ಞಾನೇಶ್ವರ ಮ್ಯಾಕಲ್ ಆಗಮಿಸಿದ್ದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಚಿನ ಲಾಡೆ, ರಾಜಮಾತೆ ಜಿಜಾಮಾತಾ ಅವರು ಹೇಗೆ ಛತ್ರಪತಿ ಶಿವಾಜಿ ಮಹಾರಾಜರನ್ನು ರೂಪಿಸಿದರು. ಇಂದಿನ ಕಾಲದಲ್ಲಿಯೂ ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಉತ್ತೇಜಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಅಂತಹ ತಾಯಂದಿರನ್ನು ಗೌರವಿಸುವ ಉದ್ದೇಶದಿಂದ ಕ್ರೀಡಾ ಭಾರತಿ ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಮಕ್ಕಳನ್ನು ರೂಪಿಸಿದ ತಾಯಂದಿರಾದ ಅಂಜಲಿ ಅವತಾಡೆ (ಮಂಗಲವೇಢಾ), ಕರುಣಾ ಶಿವಶರಣ (ಘೋಡೆಶ್ವರ–ಮಾಚನೂರು), ವಿದ್ಯಾ ಸರಗುಳೆ (ಕರಕಂಬ) ಹಾಗೂ ಖಾತೂನ್ ಜಮಾದಾರ (ಹುಳಜಂತಿ–ಉಮದಿ) ಅವರಿಗೆ ಜೀಜಾಮಾತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತೆ ಖಾತೂನ್ ಜಮಾದಾರ, ಮುಖ್ಯ ಅತಿಥಿ ಜ್ಞಾನೇಶ್ವರ ಮ್ಯಾಕಲ್, ಸೀಮಾತಾಯಿ ಪರಿಚಾರಕ ಮಾತನಾಡಿದರು.

ಕಾರ್ಯಕ್ರಮದ ಯಶಸ್ವಿಗಾಗಿ ಜಿಲ್ಲಾಧ್ಯಕ್ಷ ಸೋಮನಾಥ ಗಾಯಕವಾಡ ಹಾಗೂ ಜಿಲ್ಲಾ ಕಾರ್ಯದರ್ಶಿ ರವಿ ಓಹೊಲ್ ಅವರೊಂದಿಗೆ ಓಂಕಾರ ಕಾಪಸೆ, ಪ್ರವೀಣ ದೇಶಪಾಂಡೆ, ಬಾಲಕೃಷ್ಣ ಡಿಂಗರೆ, ಸುನಿಲ ಜಗತಾಪ , ತುಕಾರಾಮ ಖಂದಾಡೆ ಸೇರಿದಂತೆ ಹಲವು ಪದಾಧಿಕಾರಿಗಳು ಶ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.