ಹೊರ್ತಿ: ಮಂಗಳವಾರ ಸಂಜೆ ಬಿರುಗಾಳಿ ಮತ್ತು ಮಳೆಗೆ ಸಮೀಪದ ಇಂಚಗೇರಿ ಗ್ರಾಮದ ಜ್ಞಾನ ಸಂಗಮ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಖಾಸಗಿ ಶಾಲೆಯ ತಗಡಿನ ಚಾವಣಿ ಹಾರಿ ಹಾನಿಯಾಗಿದೆ.

ತಗಡುಗಳು ಹಾರಿ ₹ 2 ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದೆ. ಎರಡು ಕೋಣೆಗಳ ಒಳಗಿನ ವಿವಿಧ ಸಾಹಿತಿಗಳ ಸೇರಿದಂತೆ 25ಕ್ಕೂ ಹೆಚ್ಚು ಮಹಾತ್ಮರ ಫೋಟೊ ಹಾಗೂ ಟ್ರೆಜರಿಗಳಿಗೂ ಹಾನಿ ಆಗಿದೆ. ಅಲ್ಲದೇ ಶಾಲೆಯ ಹಿಂದೆ ಇರುವ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು ಶಾಲೆಯ ಸಂಸ್ಥಾಪಕ-ಅಧ್ಯಕ್ಷ ಅಲಿಸಾಬ ಚಡಚಣ ತಿಳಿಸಿದರು.

ಶಾಲೆಯ 70ಕ್ಕೂ ಹೆಚ್ವು ತಗಡುಗಳು ಹಾರಿ ಹೋಗಿ ದೂರದ ಬೂದಿಹಾಳ ವಸತಿ ಪ್ರದೇಶ ಮತ್ತು ಮಡ್ಡಿಯ ಅವರಣಗಳಲ್ಲಿ ಬಿದ್ದಿವೆ. ಇಂಚಗೇರಿ-ಕನ್ನೂರು ರಸ್ತೆಯ ಮೇಲೆ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಆಗಿಲ್ಲ ಎಂದು ಸ್ಥಳೀಯ ವಸತಿ ಪ್ರದೇಶದ ನಿವಾಸಿ ರೇವಣಸಿದ್ಧ ಈರಪ್ಪ ಬೂದಿಹಾಳ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1807482080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.