ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪನ್ನ ಅಕ್ರಮ ಮಾರಾಟ: 48 ಪ್ರಕರಣ ದಾಖಲು

Last Updated 31 ಮಾರ್ಚ್ 2021, 16:00 IST
ಅಕ್ಷರ ಗಾತ್ರ

ವಿಜಯಪುರ:ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ ಬುಧವಾರ ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಪ್ರಾರಂಭಿಸಿ ಟಿಪ್ಪು ಸುಲ್ತಾನ ವೃತ್ತದ ಮಾರ್ಗವಾಗಿ ಗಾಂಧಿ ಚೌಕ್‌ ವೃತ್ತದ ವರೆಗೆ ದಾಳಿ ನಡೆಸಿ, ಈ ಮಾರ್ಗದಲ್ಲಿ ಬರುವಂತಹ ವಿವಿಧ ಪಾನ್ ಶಾಪ್‌ಗಳಿಗೆ ಹಾಗೂ ಶಾಲಾ ಆವರಣದಿಂದ 100 ಅಡಿ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಎಚ್ಚರಿಕೆ ನೀಡಿ, ದಂಡವನ್ನು ವಿಧಿಸಲಾಯಿತು.

ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ,ವ್ಯಾಪಾರಸ್ಥರ ವಿರುದ್ಧ ಒಟ್ಟು 48 ಪ್ರಕರಣ ದಾಖಲಿಸಿ ₹ 3600 ದಂಡ ವಸೂಲಿ ಮಾಡಲಾಯಿತು.

ನಗರದ ವಿವಿಧೆಡೆ ಒಟ್ಟು 32 ನಾಮಫಲಕಗಳನ್ನು ಅಳವಡಿಸಲಾಯಿತು ಹಾಗೂ ತಂಬಾಕು ಉತ್ಪನ್ನಗಳ 6 ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT