ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳಕ್ಕೆ ಶಾಶ್ವತ ಯೋಜನೆ ಜಾರಿ: ನಾಡಗೌಡ

Last Updated 18 ಮಾರ್ಚ್ 2023, 15:28 IST
ಅಕ್ಷರ ಗಾತ್ರ

ತಾಳಿಕೋಟೆ: ನನ್ನ ತಂಟೆಗೆ ಬರಬೇಡಿ, ನನ್ನ ಬಗ್ಗೆ ಸಲ್ಲದ ಆರೋಪ ಸರಿಯಲ್ಲ, ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ಶಾಶ್ವತವಾದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಮಾಡಿದ ಶೇ 10ರಷ್ಟು ಕೆಲಸ ನಿಮ್ಮ ಅವಧಿಯಲ್ಲಿ ಮಾಡಿಲ್ಲ. ನಾನು ಮಾಡಿದ ಅಭಿವೃದ್ದಿ ಕೆಲಸಗಳ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದಪಡಿಸಿದರೆ ದಾಖಲೆಗಳೊಂದಿಗೆ ಬರುತ್ತೇನೆ. ಮತಕ್ಷೇತ್ರಕ್ಕೆ ನಿಮ್ಮ ಶಾಸ್ವತವಾದ ಯೋಜನೆ ಯಾವುದು ಎನ್ನುವುದನ್ನು ತಿಳಿಸಿ’ ಎಂದು ಶಾಸಕ ನಡಹಳ್ಳಿ ಅವರಿಗೆ ಸವಾಲು ಹಾಕಿದರು.

‘ಪಡೆಕನೂರ, ಇಂಗಳಗೇರಿ, ಹೊಕ್ರಾಣಿ, ತಮದಡ್ಡಿ, ಬಸರಕೋಡ ಕೆರೆ ನೀರು ತುಂಬಿದ್ದು, ನಾಲತವಾಡ, ಮುದ್ದೇಬಿಹಾಳ, ತಾಳಿಕೋಟೆ ಬಸ್ ನಿಲ್ದಾಣ ನಿರ್ಮಾಣ, ಪುರಸಭೆ ಕಾರ್ಯಾಲಯ, ವ್ಯಾಪಾರ ಮಳಿಗೆಗಳು, ಕೋರ್ಟ್‌ ಕಟ್ಟಡ, ಮಿನಿ ವಿಧಾನಸೌಧ, ಬೂದಿಹಾಳ -ಪೀರಾಪುರ, ನಾಗರಬೆಟ್ಟ ಏತ ನೀರಾವರಿ, ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳು, ರಾಜ್ಯ ಹೆದ್ದಾರಿಗಳು, ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿ ಸೇತುವೆ ಸೇರಿದಂತೆ ಹಲವು ಶಾಸ್ವತ ಯೋಜನೆಗಳನ್ನು ಜಾರಿಯಾಗಿದ್ದು ನನ್ನ ಅವಧಿಯಲ್ಲಿ’ ಎಂದು ಸಮರ್ಥಿಸಿಕೊಂಡರು.

‘ನಿಮ್ಮ ಅವಧಿಯಲ್ಲಿ ಸಿಸಿ ರಸ್ತೆಗಳನ್ನು ಬಿಟ್ಟರೆ ಬೇರೇನು ಅಭಿವೃದ್ದಿ ಮಾಡಿದ್ದಿರಿ ಹೇಳಿ, ಒಂದು ಎಕರೆ ನೀರಾವರಿ ಹೆಚ್ಚಿಸಲಾಗದ ನೀವು ಅಭಿವೃದ್ದಿ ಹರಿಕಾರರು ಎಂದು ಹೇಳಿಕೊಂಡು ತಿರುಗಾಡುತ್ತೀರಿ’ ಎಂದು ಆರೋಪಿಸಿದರು.

ತಾಳಿಕೋಟೆ, ಮುದ್ದೇಬಿಹಾಳ ನಾಲತವಾಡ ಪಟ್ಟಣಗಳಿಗೆ 24X7 ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಆದರೂ ಸಹ ಇನ್ನುವರೆಗೂ ಆರಂಭಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.

2018 ರಲ್ಲಿಯೇ ತಾಳಿಕೋಟೆ 110 ಕೆವಿ ವಿದ್ಯುತ್ ಕೇಂದ್ರ, ಉದ್ಘಾಟನೆ ಆಗಿದೆ. ಅದು ಎಲ್ಲರಿಗೂ ಗೊತ್ತು. ಆದರೆ ನೀವು ನಾಲತವಾಡದಲ್ಲಿ ಮತ್ತೊಮ್ಮೆ ಉದ್ಘಾಟನೆ ಮಾಡಲು ಹೊರಟಿರುವದು ಹಾಸ್ಯಾಸ್ಪದವಾಗಿದೆ. ನಿಮ್ಮ ಅಧಿಯಲ್ಲಿ ಒಂದು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದೀರಾ?. ನೂತನ ಆಸ್ಪತ್ರೆ ಸ್ಥಾಪಿಸಿದ್ದಿರಾ? ಕಾಲೇಜುಗಳನ್ನು ಮಂಜೂರಿಸಿಕೊಂಡು ಬಂದಿದ್ದೀರಾ? ವಸತಿ ಶಾಲೆಗಳು, ಐಟಿಐ ಕಾಲೇಜು, ಡಿಪ್ಲೊಮಾ ಕಾಲೇಜು ಮಾಡಿದ್ದೀರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ. ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುದ್ದೇಬಿಹಾಳದಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸುತ್ತೇನೆ. ಅವ್ಯವಹಾರದಲ್ಲಿ ಭಾಗವಹಿಸಿದ ಅಧಿಕಾರಿಗಳು, ಗುತ್ತಿಗೆದಾರರನ್ನು ಜೈಲಿಗೆ ಕಳಿಸುವುದು ನಿಶ್ಚಿತ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ವಿಜಯಸಿಂಗ್‌ ಹಜೇರಿ, ಮಲ್ಲನಗೌಡ ಯಾತಗಿರಿ, ಮಾಸುಮ ಕೆಂಬಾವಿ, ಸಿದ್ದನಗೌಡ ಪಾಟೀಲ, ಬಸನಗೌಡ ಜೈನಾಪೂರ, ಕಾರ್ತಿಕ ಕಟ್ಟಿಮನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT