ಇಂಡಿ: ಇಂಡಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಸಿಂದಗಿ ರಸ್ತೆಯ ವಾರ್ಡ್ ನಂ.12 ರಲ್ಲಿ ಸ್ಮಾರ್ಟ್ ಕ್ಲಾಸ್ ಒಳಗೊಂಡ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ.

ಮಕ್ಕಳ ಸ್ನೇಹಿ, ಸುಸಜ್ಜಿತ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಕಲಿಕೆ ಮತ್ತು ಸುರಕ್ಷಿತ ಆಟದ ಮೈದಾನ, ವಿಶಾಲವಾದ ಕಲಿಕಾ ಕೊಠಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳ ಸ್ನೇಹಿ ಶೌಚಾಲಯ, ಬಣ್ಣ ಬಣ್ಣದ ಗೊಡೆ ಚಿತ್ರಗಳಿಂದ ಆಕರ್ಷಕವಾಗಿ ರೂಪಿಸಲಾಗಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ.

ಇಂದು ಕನ್ನಡ ಶಾಲೆಯಲ್ಲಿ ಓದಿಸಲು ಪೋಷಕರು ಹಿಂದೇಟು ಹಾಕುವ ಪರಿಸ್ಥಿತಿಯಲ್ಲಿ ಇಂಡಿ ನಗರದ ಈ ಹೈಟೆಕ್ ಅಂಗನವಾಡಿಯು ಮಕ್ಕಳಿಗೆ ಅಗತ್ಯವಿರುವ ಸಲಕ ಸೌಲಭ್ಯಗಳುಳ್ಳ ಅಂಗನವಾಡಿ ಕಟ್ಟಡವನ್ನು ಜಿಲ್ಲಾ ಪಂಚಾಯಿತಿ ಉಳಿತಾ ಅನುದಾನದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಗಮನ ಸೆಳೆಯಲಾಗಿದೆ.

ತರಗತಿ ಕೋಣೆ, ಅಡುಗೆ ಕೋಣೆ, ಶೌಚಾಲಯ, ಮಕ್ಕಳಿಗಾಗಿ ಆಟದ ಮೈದಾನ ಸೇರಿದಂತೆ ಮೂಲ ಸೌಲಭ್ಯದೊಂದಿಗೆ ನಿರ್ಮಿಸಿದ್ದು, ಮಕ್ಕಳ ಕಲಿಕೆಗೆ ಆಕರ್ಷಣೀಯ ಕೇಂದ್ರವಾಗಿದೆ. ಉದ್ಯಾನ, ಒಳಾಂಗಣ, ಹೊರಾಂಗಣದಲ್ಲಿ ವಿವಿಧ ಕಲಿಕೆ, ಕಥೆಯ ಚಿತ್ರಗಳನ್ನು ಚಿತ್ರಿಸಲಾಗಿದೆ. ಅಂಗನವಾಡಿ ಕಟ್ಟಡದ ಒಂದಿಂಚು ಜಾಗ ಖಾಲಿ ಬಿಡದೆ ಮಕ್ಕಳನ್ನು ಆಕರ್ಷಿಸುವಂತೆ ಬಣ್ಣ ಬಳೆಯಲಾಗಿದೆ. ಪ್ರಾಣಿ ಚಿತ್ರಗಳು, ತರಕಾರಿ, ಹಣ್ಣುಗಳ ಚಿತ್ರಗಳು, ಕಲಿಕೆಯ ಅಕ್ಷರಗಳು ಬಣ್ಣದಲ್ಲಿ ರಚನೆಯಾಗಿದ್ದು, ಕಂಗೊಳಿಸುತ್ತಿವೆ.

ಹೊಸ ವಿನ್ಯಾಸವನ್ನು ಕಂಡು ಮಕ್ಕಳು ಸಂತೋಷಪಟ್ಟಿದ್ದಾರೆ.

ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಮೇಲ್ವಿಚಾರಣೆಯಲ್ಲಿ ಈ ಕಟ್ಟಡ ಕಾಮಗಾರಿ ನಡೆದಿದ್ದು, ಮಾದರಿ ಎನ್ನುವಂತೆ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.