ಇಂಡಿ: ಇಂಡಿ ನಗರಾಭಿವೃದ್ಧಿ ಪ್ರಾಧಿಕಾರವು ನಗರದ ಯೋಜನಾಬದ್ದ ಅಭಿವೃದ್ದಿಗಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಇದರ ಪ್ರಯೋಜನ ಪಡೆದು ಇಂಡಿ ನಗರವನ್ನು ಅಭಿವೃದ್ಧಿ ಪಡಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಬುಧವಾರ ನಗರದ ಆಡಳಿತ ಸೌಧದ ಮೂರನೇಯ ಮಹಡಿಯಲ್ಲಿ ಇಂಡಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ನಗರದ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಇಂಡಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿ, ನಗರಗಳ ವ್ಯವಸ್ಥಿತ ಬೆಳವಣೆಗೆಗೆ ಯೋಜನೆ ಸಿದ್ದಪಡಿಸುವದು ಮತ್ತು ಅನುಷ್ಠಾನಗೊಳಿಸುವದು ಇದರ ಉದ್ದೇಶವಾಗಿದೆ. ಅಭಿವೃದ್ಧಿಪ ಡಿಸಿದ ಪ್ರದೇಶಗಳಲ್ಲಿ ರಸ್ತೆ, ನೀರು ಸರಬರಾಜು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವದು ನಮ್ಮ ಗುರಿಯಾಗಿದೆ. ವ್ಯವಸ್ಥಿತ ಅಭಿವೃದ್ದಿ ವಸತಿ ಯೋಜನೆಗಳ ನಿರ್ಮಾಣ ಮತ್ತು ಮೂಲಸೌಕರ್ಯ ನೀಡುವ ಉದ್ದೇಶವೂ ಇದೆ ಎಂದರು.

ಇದೇ ವೇಳೆ ನೂತನ ಅಧ್ಯಕ್ಷರಾಗಿ ಅಜೀತ ಧನಶೆಟ್ಟಿ, ಸದಸ್ಯರಾಗಿ ಚನ್ನಪ್ಪ ಮಲ್ಲಪ್ಪ ಬೋಡಿ, ರವೀಂದ್ರ ನಿಗಡಿ, ದತ್ತಾತ್ರೇಯ ಜೋಶಿ ಅಧಿಕಾರ ಸ್ವೀಕರಿಸಿದರು.

ಜಿಲ್ಲಾಧಿಕಾರಿ ಕೆ.ಆನಂದ, ಪೌರಾಯುಕ್ತ ಶಿವಾನಂದ ಪೂಜಾರಿ, ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಬಿ.ಎಸ್.ಕಡಕಬಾವಿ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ, ಅಶೋಕ ಗಜಾಕೋಶ, ಸಂದೀಪ ಧನಶೆಟ್ಟಿ, ಶಾಂತುಗೌಡ ಬಿರಾದಾರ, ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ ಇದ್ದರು. ನೂತನ ಅಧಕ್ಷರಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರನ್ನು ಸಾಯಿ ವಿದ್ಯಾವರ್ಧಕ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಗಣ್ಯರು ಸನ್ಮಾನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-821984853

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.