ಇಂಡಿ: ಆಕಸ್ಮಿಕ ಬೆಂಕಿ ತಗುಲಿದರೆ ಅದನ್ನು ತಡೆಯುವುದು ಅಗ್ನಿ ಶಾಮಕ ಇಲಾಖೆ ಕರ್ತವ್ಯ. ಕಾರಣ ಸಾರ್ವಜನಿಕರು ಅಂತಹ ಸಮಯದಲ್ಲಿ 101 ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕು ಎಂದು ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ದೇವದಾನಮ್ಮ ಹೇಳಿದರು.

ನಗರದ ಅಗ್ನಿ ಶಾಮಕ ಇಲಾಖೆಯಲ್ಲಿ ನಡೆದ ಅಗ್ನಿ ಶಾಮಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನೆಗಳಿಗೆ, ಹುಲ್ಲಿನ ಬಣಿವೆಗಳಿಗೆ, ಮರದ ರಾಶಿಗೆ ಬೆಂಕಿ ಬಿದ್ದಾಗ ಸಾಕಷ್ಟು ಮರಳು ಮತ್ತು ನೀರನ್ನು ಸುರಿಯಿರಿ. ಸೀಮೆ ಎಣ್ಣೆ, ಪೆಟ್ರೋಲ್ ಅಥವಾ ಇತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ಬಿದ್ದಾಗ ನೀರನ್ನು ಸುರಿಯಬೇಡಿ. ನೀರು ಭಾರವಾಗಿರುವುದರಿಂದ ಬೆಂಕಿಯು ಬೇರೆ ಕಡೆಗೆ ಹರಡುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಮರಳನ್ನು ಬಳಸಿ ಎಂದರು.

ವಿದ್ಯುತ್ ಒಲೆಗಳಲ್ಲಿ ಕೆಲಸ ಮಾಡುವಾಗ ಮರದ ಹಲಗೆ ಮೇಲೆ ನಿಂತು ಕೆಲಸ ಮಾಡಬೇಕು. ವಿದ್ಯುತ್ ಬೆಂಕಿ ತಗುಲಿದಾಗ ಬೇಗನೆ ಮೇನ್ ಸ್ವೀಚ್ ಆಫ್ ಮಾಡಬೇಕು. ನಂತರ ಬೆಂಕಿ ಆರಿಸಲು ಮರಳು ಅಥವಾ ಮಣ್ಣನ್ನು ಬಳಸಿ, ಮಷಿನರಿ ಯಂತ್ರದ ಸಾಮಾನುಗಳಿಗೆ, ಕಾರು ಇಂಜಿನಿಗೆ ಬೆಂಕಿ ತಗುಲಿದಾಗ ನೀರನ್ನು ಸುರಿಯಬೇಡಿ. ಬದಲಾಗಿ ಮಣ್ಣು ಬಳಸಿ ಎಂದು ತಿಳಿಸಿದರು.

ಧರೆಪ್ಪ ಪೂಜಾರಿ, ಸಂತೋಷ ಪೂಜಾರಿ, ರಿಯಾಜ ಯಾದಗಿರಿ, ಬಬ್ಲು ಮಾಣಿಕ, ಬಸವರಾಜ ನಾವಿ, ಅನಿಲ್ ಚವ್ಹಾಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-26-1772215016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.