ಇಂಡಿ: ‘ಕೇಂದ್ರದಲ್ಲಿ ಕೃಷಿ ಸಚಿವರಾಗಿ ವೈಜ್ಞಾನಿಕ ಕೃಷಿ ಮೂಲಕ ಹಸಿರು ಕ್ರಾಂತಿಯನ್ನು ಯಶಸ್ವಿಗೊಳಿಸಿ ಆಹಾರ ಭದ್ರತೆಗೆ ಬುನಾದಿ ಹಾಕಿದವರು ಬಾಬು ಜಗಜೀವನರಾಂ’ ಎಂದು ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸತ್ಯಣ್ಣ ಹಡಪದ ಹೇಳಿದರು.

ನಗರದ ಬಾಬು ಜಗಜೀವನರಾಂ ಸಭಾಭವನದಲ್ಲಿ ತಾಲ್ಲೂಕು ಆಡಳಿತ, ತಾ.ಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಬಾಬು ಜಗಜೀವನರಾಂ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನಮಾನಸದಲ್ಲಿ ಬಾಬೂಜಿ ಎಂದೇ ಜನಪ್ರಿಯರಾಗಿರುವ ಬಾಬು ಜಗಜೀವನರಾಂ ಅವರು, ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ. ದೇಶದ ಅತ್ಯುನ್ನತ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದರು. ದಲಿತ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡಿ ಜೀವನ ಮುಡಿಪಾಗಿಟ್ಟಿದ್ದರು’ ಎಂದರು.

ಮುಖಂಡ ಸುರೇಶ ನಡಗಡ್ಡಿ, ತಹಶೀಲ್ದಾರ್ ಬಿ.ಎಸ್. ಕಡಕಬಾವಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಶರಣಪ್ಪ ಚಾಳಿಕಾರ ಮಾತನಾಡಿದರು. ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಯಿದಾ ಮುಜಾವರ, ಪ್ರಕಾಶ ರಾಠೋಡ, ಶಿವು ಕಟ್ಟಿಮನಿ, ರವೀಂದ್ರ ನಾರಾಯಣಕರ, ಚಂದ್ರಶೇಖರ ಹೊಸ ಮನಿ , ಶಿವು ಬಗಲಿ, ಅಯೂಬ ನಾಟಿಕಾರ, ನಾಗೇಂದ್ರ ಮೇತ್ರಿ, ಮಲ್ಲು ಮಡ್ಡಿಮನಿ, ಪರಶುರಾಮ ಬಾವಿಕಟ್ಟಿ ಇದ್ದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಕ್ಷಿತಾ ಕೊಡಹೊನ್ನ, ಕಿರಣ ಪವಾರ ಮತ್ತು ತನು ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ಉಮೇಶ ಲಮಾಣಿ ಸ್ವಾಗತಿಸಿದರು. ಶರಣಪ್ಪ ಚಾಳೀಕಾರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-26-388013663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.