ಇಂಡಿ: ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ಒಂದು ಟಿಎಂಸಿ ನೀರು ಹರಿಯ ಬಿಡಲಾಗಿದೆ ಎಂದು ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.

ವಿಭಾಗೀಯ ಆಯುಕ್ತರು ಕಲಬುರಗಿ ವಿಭಾಗ ಇವರು ಬೆಳಗಾವಿ ವಿಭಾಗೀಯ ಆಯುಕ್ತರ ಕೋರಿಕೆಯ ಮೇರೆಗೆ ನಾರಾಯಣ ಜಲಾಶಯದಿಂದ ಒಂದು ಟಿ.ಎಂ.ಸಿ ನೀರನ್ನು ಹರಿಸಿದ್ದಾರೆ.

ಕೆಬಿಜೆಎನ್ಎಲ್ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಇವರ ಪ್ರಯತ್ನದಿಂದ ಕಾಲುವೆಗೆ ನೀರು ಹರಿಸಲಾಗಿದೆ. ನೀರು ಈಗಾಗಲೇ ಏಪ್ರಿಲ್ 11 ರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುತ್ತಿದ್ದು ಒಂದು ಟಿಎಂಸಿ ಹೆಚ್ಚುವರಿ ನೀರಿನಿಂದ ಏ.23ರ ವರೆಗೆ ನೀರು ಕಾಲುವೆಯಲ್ಲಿ ಹರಿಯುತ್ತದೆ ಮತ್ತು ಈ ನೀರು ಕೇವಲ ಕುಡಿಯಲು ಮತ್ತು ಜನ ಜಾನುವಾರು ಮಾತ್ರ ಉಪಯೋಗಿಸಲು ತಿಳಿಸಿದ್ದಾರೆ.

ಇಂದು ಕೃಷ್ಣಾ ಕಾಲುವೆಗೆ ಕಂದಾಯ ಉಪವಿಭಾಗಾಧಿಕಾರಿ ಭೇಟಿ ನೀಡಿ ಸಾಲೋಟಗಿಯಿಂದ ಮಾವಿನಹಳ್ಳಿಯ ವರೆಗೆ ಕಾಲುವೆಯನ್ನು ವೀಕ್ಷಿಸಿದರು. ಇಒ ಭೀಮಾಶಂಕರ ಕನ್ನೂರ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಕೆಬಿಜೆಎನ್ಎಲ್ ಅಧಿಕಾರಿ ಭೀರಪ್ಪ ಪೂಜಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-26-1100670685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.