ಇಂಡಿ: ‘ಅಹಿಂಸಾ ಪರಮೋ ಧರ್ಮ ಎಂಬ ಸಂದೇಶ ಸಾರಿದ ಮಹಾವೀರರ ಜೀವನಾದರ್ಶಗಳು ನಮಗೆ ದಾರಿದೀಪವಾಗಬೇಕು. ಶಾಂತಿ - ಸೌಹಾರ್ದತೆ ಯನ್ನು ಕಾಪಾಡುವ ಕಾರ್ಯ ಎಲ್ಲರಿಂದಾಗಬೇಕು’ ಎಂದು ಶಾಠಸಕ ಯಶವಂತರಾಯಗೌಡ ಪಾಟೀಲ ಕರೆ ನೀಡಿದರು.

ನಗರದಲ್ಲಿ ಜೈನ್ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿಜಯಪುರ ಜಿಲ್ಲೆಯಲ್ಲಿ ಇಂಡಿ ಅತೀ ದೊಡ್ಡ ನಗರವಾಗಿದ್ದು, ಇಲ್ಲಿ ನಗರಸಭೆ, ನಗರ ಯೋಜನಾ ಪ್ರಾಧಿಕಾರ ರಚಿಸಲಾಗಿದೆ. ರಾಜ್ಯದ 6 ತಾಲ್ಲೂಕು, ನಗರಗಳು ಮಾತ್ರ ಮಾಸ್ಟರ್ ಪ್ಲಾನ್ಗೆ ಅಳವಡಿಸಲಾಗಿದೆ, ಅದರಲ್ಲಿ ಇಂಡಿಯೂ ಒಂದು. ಮಾಸ್ಟರ್ ಪ್ಲ್ಯಾನ್ ಜಾರಿಯಾದರೆ ಶಿಕ್ಷಣ, ಕೈಗಾರಿಕೆ ಬೇರೆ ಬೇರೆ ಕ್ಷೇತ್ರ, ವಲಯಗಳನ್ನು ರಚಿಸಿ ಸಮಗ್ರ ಬದಲಾವಣೆಗೆ ಪೂರಕವಾಗುತ್ತದೆ’ ಎಂದರು.

ಜೈನ್ ಮುದಾಯದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿದರು.

ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಸಂಜೀವ ಧನಪಾಲ, ವೀರಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಅಭಿನಂದನಾ ಕಿರಣಗಿ, ಸಂದೀಪ ಧನಶೇಟ್ಟಿ, ಪ್ರಕಾಶ ಧನಶೆಟ್ಟಿ, ಕೂಲಭೂಷಣ ಕೋಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-26-1843320429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.