ಮೆಗಾಮಾರುಟ್ಟೆ ಪ್ರಾರಂಭಕ್ಕೆ ಕೆಲವು ತಾಂತ್ರಿಕ ಸಮಸ್ಯೆ ಇದ್ದವು. ಈಗ ಪರಿಹಾರವಾಗಿದೆ. ಒಂದೆರಡು ವಾರಗಳಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ಪ್ರಾರಂಭಿಸಲು ಮಳಿಗೆ ಕೊಡಲಾಗುವುದು
ಶಿವಾನಂದ ಪೂಜಾರಿ, ಇಂಡಿ ನಗರಸಭೆಯ ಪೌರಾಯುಕ್ತ
ಇಂಡಿ ನಗರದಲ್ಲಿರುವ ಮೆಗಾ ಮಾರುಕಟ್ಟೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲು ಅಗತ್ಯ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಕೆ.ಆನಂದ ಹಾಗೂ ಪೌರಾಯುಕ್ತ ಶಿವಾನಂದ ಪೂಜಾರಿ ಅವರಿಗೆ ಸೂಚನೆ ನೀಡಿದ್ದೇನೆ
ಯಶವಂತರಾಯಗೌಡ ಪಾಟೀಲ, ಶಾಸಕ
ನಗರಸಭೆಯವರು ಮತ್ತು ಜಿಲ್ಲಾಧಿಕಾರಿಗಳು ಮಳಿಗೆಗಳ ಠೇವಣಿ ಕಡಿಮೆ ಮಾಡಿ, ₹4ಸಾವಿರದಿಂದ ₹5 ಸಾವಿರವರೆಗೆ ಬಾಡಿಗೆ ನೀಡಿದರೆ ಮೆಗಾ ಮಾರುಕಟ್ಟೆಯಲ್ಲಿರುವ ಎಲ್ಲಾ ಮಳಿಗೆಗಳು ಬಾಡಿಗೆಗೆ ಹೋಗುತ್ತವೆ