ಇಂಡಿ: ರಾಜಕೀಯವಾಗಿ ನನ್ನನ್ನು ಬೆಳೆಸಿರುವ ಹಂಜಗಿ ಗ್ರಾಮದ ಜನತೆಯ ಋಣ ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ. ಸಹಾಯ ಮಾಡಿದವರನ್ನು ಸ್ಮರಿಸದಿದ್ದರೆ ಮನುಷ್ಯತ್ವ ಎನ್ನುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಶನಿವಾರ ಹಂಜಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಹಂಜಗಿ ಗ್ರಾಮದ ಜನತೆ ಹೃದಯ ವೈಶ್ಯಾಲತೆ ಹೊಂದಿದ್ದಾರೆ. ನನಗೂ ಈ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.

ರಾಜಕೀಯ ಮುಖಂಡ ಮುತ್ತಪ್ಪ ಪೋತೆ ಮಾತನಾಡಿ, 30 ವರ್ಷ ಸುಧೀರ್ಘ ಶಾಸಕ ಯಶವಂತರಾಯಗೌಡ ಪಾಟೀಲರ ರಾಜಕೀಯ ಜೀವನದಲ್ಲಿ ನಾನು ಕೂಡಾ ಅವರ ಮಾರ್ಗದರ್ಶನದಲ್ಲಿ ನಡೆದುಕೊಂಡಿದ್ದೇನೆ ಎಂದು ಹೇಳಿದರು.

ಗ್ರಾಮದ ಹಿರಿಯರಾದ ಲಾಲ್ ಸಾಹುಕಾರ, ಅಪ್ಪುಗೌಡ ಪಾಟೀಲ, ಲಿಂಬೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಭೀಮಣ್ಣ ಕೌಲಗಿ, ಬಿಸಿ ಸಾಹುಕಾರ, ಎಂ.ಎಂ ಮಾಳಗೆ, ಗುಂಡು ಕಂಟಿಕಾರ, ಕೆಂಚಪ್ಪ ಪೂಜಾರಿ, ಬಿ.ಸಿ ಸಾಹುಕಾರ, ಅಬಶಾ ಜಮಖಂಡಿ, ಸದಾಶಿವ ಪ್ಯಾಟಿ, ಬಸವರಾಜ ಪಾಟೀಲ, ರಜಾಕ ಕಾರಬಾರಿ,ಪ್ರಶಾಂತ ಕಾಳೆ, ಜಾವೀದ ಮೋಮಿನ್ ವೇದಿಕೆಯಲ್ಲಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇಪ್ಪ ಏವೂರ, ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಪಿ.ಐ.ಆರ್.ಡಿ ಶಿವಾಜಿ ಬನಸೊಡೆ, ಇಇ ಬಂಡಿ, ಇಇ ರಾಜೇಶ ಹೂಗಾರ, ಬಿಸಿಎಂ ಅಧಿಕಾರಿ ಗದ್ಯಾಳ. ಶಿವರಾಜ ಬಿರಾದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.