ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: 1,72,788 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ - ಕೃಷಿ ಇಲಾಖೆ

Published 1 ಜೂನ್ 2023, 11:17 IST
Last Updated 1 ಜೂನ್ 2023, 11:17 IST
ಅಕ್ಷರ ಗಾತ್ರ

ಇಂಡಿ: ‘ತಾಲ್ಲೂಕಿನಲ್ಲಿ ಇಂಡಿ, ಬೆಳ್ಳುಳ್ಳಿ ಮತ್ತು ಚಡಚಣ ಮೂರು ಕೃಷಿ ಹೋಬಳಿ ಕೇಂದ್ರಗಳಿದ್ದು, ಅವುಗಳೆಲ್ಲ ಸೇರಿ ವಿವಿಧ ಬೆಳೆಗಳು ಒಟ್ಟು 1,72,788 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿ ಹೊಂದಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿ ಮುಸುಕಿನ ಜೋಳ 6,180 ಹೆಕ್ಟೇರ್, ಸಜ್ಜೆ 3,510 ಹೆಕ್ಟೇರ್, ನವಣೆ 55 ಹೆಕ್ಟೇರ್, ಬರಗು 5 ಹೆಕ್ಟೇರ್, ಸಾವೆ 5 ಹೆಕ್ಟೇರ್, ಕೊರಲೆ 5ಹೆಕ್ಟೇರ್, ಹಾರಕ 5ಹೆಕ್ಟೇರ್, ಉದಲು 10ಹೆಕ್ಟೇರ್, ತೊಗರಿ 1,30,158 ಹೆಕ್ಟೇರ್, ಹೆಸರು 1,012ಹೆಕ್ಟೇರ್, ಹುರುಳಿ 44 ಹೆಕ್ಟೇರ್, ಉದ್ದು 751 ಹೆಕ್ಟೇರ್, ಮಡಿಕೆ 45 ಹೆಕ್ಟೇರ್ ಅಲಸಂದಿ 10 ಹೆಕ್ಟೇರ್, ಶೇಂಗಾ 1,207 ಹೆಕ್ಟೇರ್, ಸೂರ್ಯಕಾಂತಿ 1,243 ಹೆಕ್ಟೇರ್, ಎಳ್ಳು 8 ಹೆಕ್ಟೇರ್, ಗುರೆಳ್ಳು 8 ಹೆಕ್ಟೇರ್, ಸೋಯಾ ಅವರೆ 52 ಹೆಕ್ಟೇರ್, ಹತ್ತಿ 3,066 ಹೆಕ್ಟೇರ್, ಕಬ್ಬು ನಾಟಿ 8,550 ಹೆಕ್ಟೇರ್, ಕಬ್ಬು ಕೊಳೆ 16,850 ಹೆಕ್ಟೇರ್ ಸಿದ್ಧಗೊಳಿಸಿದ್ದಾರೆ.

ಮುಂಗಾರು ಬಿತ್ತನೆಗೆ ಬೀಜಗಳ ಬೇಡಿಕೆ:

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರಿಗೆ ಬೀಜಗಳ ಕೊರತೆಯಾಗದಂತೆ ಕ್ರಮ ಜರುಗಿಸಲಾಗಿದೆ. ಬೀಜಗಳ ದಾಸ್ತಾನಿಗೆ ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಈಗಾಗಲೇ ಕೆಲವು ಬೀಜಗಳು ಬಂದಿದ್ದು, ದಾಸ್ತಾನು ಮಾಡಲಾಗಿದೆ. ಒಟ್ಟು ಇಂಡಿ ತಾಲ್ಲೂಕಿನಲ್ಲಿ 3 ಕ್ವಿಂಟಲ್ ನವಣೆ, 36 ಕ್ವಿಂಟಲ್ ಸಜ್ಜೆ, 900 ಕ್ವಿಂಟಲ್ ಗೋವಿನ ಜೋಳ, 2,100 ಕ್ವಿಂಟಲ್ ತೊಗರಿ, 30 ಕ್ವಿಂಟಲ್ ಉದ್ದು, 30 ಕ್ವಿಂಟಲ್ ಹೆಸರು, 90 ಕ್ವಿಂಟಲ್ ಶೇಂಗಾ, 75 ಕ್ವಿಂಟಲ್ ಸೂರ್ಯಕಾಂತಿ ಹೀಗೆ ಒಟ್ಟು 3,264 ಕ್ವಿಂಟಲ್ ಬೀಜಕ್ಕಾಗಿ ಬೇಡಿಕೆ ಸಲ್ಲಿಸಲಾಗಿದ್ದು, ರೈತರ ಬೇಡಿಕೆಗೆ ತಕ್ಕಂತೆ ಬೀಜಗಳನ್ನು ತರಿಸಿಕೊಡಲಾಗುವುದು. ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಏವೂರ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ 102 ಮಿ.ಮಿ. ಮಳೆಯಾಗಬೇಕು. ವಾಡಿಕೆಯಂತೆ ಮಳೆಯಾದರೆ ಜೂನ್ ತಿಂಗಳು ಮುಗಿಯುವದರೊಳಗೆ ಶೇ 70 ರಿಂದ 80 ರಷ್ಟು ಮುಂಗಾರು ಬಿತ್ತನೆ ಪೂರ್ಣಗೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT