ಇಂಡಿ: ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಖೇಡಗಿ ವಿರಕ್ತಮಠದ ಶಿವ ಬಸವರಾಜೇಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ಬುಧವಾರ ತಾಲ್ಲೂಕಿನ ಅಗಡಖೇಡ ಗ್ರಾಮದಲ್ಲಿ ಲಿಂ. ಪ್ರಭುಲಿಂಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಹೆಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಕ್ತರಲ್ಲಿ ಹೃದಯ ಶ್ರೀಮಂತಿಕೆ ಇರಬೇಕು ಎಂದರು.

ಇಂಚಗೇರಿ ಬೃಹನ್ಮಮಠದ ಶಂಭುಲಿಂಗ ಶಿವಾಚಾರ್ಯರು ಹಾಗೂ ಚಡಚಣ ವಿರಕ್ತಮಠದ ಷಡಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾತ್ರಾ ಮಹೋತ್ಸವ ಅಂಗವಾಗಿ ಬೆಳಿಗ್ಗೆ ಲಿಂಗೈಕ್ಯ ಪ್ರಭುಲಿಂಗೇಶ್ವರ ಶಿವಯೋಗಿಗಳ ಕತೃ ಗದ್ದುಗೆ ಮಹಾ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಮಹಾಮಂಗಳಾರತಿಯನ್ನು ಬಸವರಾಜ ಹಿರೇಮಠ ಹಾಗೂ ಮಡಿವಾಳಯ್ಯ ಹಿರೇಮಠ ನೆರವೇರಿಸಿದರು.

ಗುರುವರ್ಯರ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ನೆರವೇರಿತು.

ಮಹೋತ್ಸವ ಅಂಗವಾಗಿ 11 ದಿನಗಳ ಕಾಲ ಆಯೋಜಿಸಿದ್ದ ನವಲಗುಂದ ನಾಗಲಿಂಗ ಅಜ್ಜನವರ ಪುರಾಣ ಪ್ರವಚನ ಮುಕ್ತಾಯಗೊಂಡಿತು. ಹೆಣ್ಣುಮಕ್ಕಳಿಗೆ ಸಿದ್ದಲಿಂಗ ಕಾಳಪ್ಪ ಬಡಿಗೇರ ದಂಪತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಪ್ರಭುಲಿಂಗೇಶ್ವರದ ವಿರಕ್ತಮಠದ ಪೀಠಾಧಿಪತಿ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಶಿಕ್ಷಕರಾದ ಎಸ್. ಎಂ.ಬಿರಾದಾರ ಹಾಗೂ ಪ್ರಭು ಪಾಟೀಲ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-135407758

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.