ಇಂಡಿ: ಭಾರತ ದೇಶವು ಆಧ್ಯಾತ್ಮದ ನೆಲೆವೀಡು. ಇಲ್ಲಿ ಹಲವಾರು ಶರಣರು, ಸಂತರು, ಧಾರ್ಮಿಕ ಮುಖಂಡರು ಆಧ್ಯಾತ್ಮಿಕ ಲೋಕಕ್ಕೆ ಕಾಣಿಕೆ ಸಲ್ಲಿಸಿ, ತಮ್ಮ ಹೆಸರನ್ನು ಈ ನಾಡಿನಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡಿ ಹೋಗಿದ್ದಾರೆ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು.

ಸೋಮವಾರ ಸಂಜೆ ಇಂಡಿ ನಗರದ ಬಸವರಾಜೇಂದ್ರ ಸತ್ಸಂಗ ಸಮಿತಿ ಆಯೋಜಿಸಿದ್ದ 105 ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ’ಶರಣರ ವಚನಗಳ ವಿಚಾರಗಳು’ ಈ ವಿಷಯದ ಕುರಿತು ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ಹಲವಾರು ಕಾಯಕ ವೃತ್ತಿಯ ಶರಣರು ತಮ್ಮ ಕಾಯಕದ ಜೊತೆಗೆ ಹಲವಾರು ವಚನ ರಚಿಸಿ, ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಗಮನ ಸೆಳೆದಿದ್ದರು ಎಂದರು.

ನಿವೃತ್ತ ಶಿಕ್ಷಕರಿಗೆ ಸನ್ಮಾನ: ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾಗಿ ಬಡ್ತಿ ಪಡೆದು, ನಿವೃತ್ತಿ ಹೊಂದಿದ ಹಿರೇಬೇವನೂರ ಗ್ರಾಮದ ಆರ್. ವಿ. ಪಾಟೀಲ ಹಾಗೂ ಕೆ.ಜಿ ನಾಟೀಕಾರ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿದ್ದರಾಮೇಶ್ವರ ಸಂಸ್ಥಾನ ಮಠದ ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಜಿಎಸ್. ವಾಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕತ್ವ ವಹಿಸಿಕೊಂಡಿದ್ದ ಶರಣಪ್ಪ ಅಪ್ಪಾಸಾಹೇಬ ಲಬ್ಬಾ ಉಪಸ್ಥಿತರಿದ್ದರು.

ಸತ್ಸಂಗ ಸಮಿತಿ ಅಧ್ಯಕ್ಷ ಪ್ರೊ ಐ. ಬಿ. ಸುರಪುರ, ಪ್ರೊ ಎಂ. ಜೆ. ಪಾಟೀಲ, ಪ್ರೊ ಎ. ಎಸ್. ಗಾಣಿಗೇರ, ಸಿ. ಎಂ. ಉಪ್ಪಿನ, ಎಸ್. ವಿ. ಹೂಗಾರ, ಎಸ್. ಎಸ್. ಈರನಕೇರಿ, ಬಿ. ಎಸ್. ಪಾಟೀಲ, ಎಚ್. ಎಸ್. ಎಳೆಗಾಂವ, ಎಂ. ಎನ್. ಬುರುಕುಲೆ, ಎನ್. ಎಲ್. ಹಚಡದ, ಎಸ್. ಸಿ. ಗಿಡಗಂಟಿ, ಎಸ್.ಎಸ್.ಅಂದೇವಾಡಿ, ಎನ್. ಟಿ. ಸಂಗಾ, ಜಯಶ್ರೀ ಪತ್ತಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-636841922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.