ಇಂಡಿ: ತಾಲ್ಲೂಕಿನ ಅಗರಖೇಡ, ಭುಯ್ಯಾರ, ನಾಗರಹಳ್ಳಿ, ಖ್ಯಾಡಗಿ, ರೋಡಗಿ ಮುಂತಾದ ಗ್ರಾಮಗಳ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಕಾರಣ ಕೃಷ್ಣ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ಇಲ್ಲವೇ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕೆಂದು ಸೋಮವಾರ ವಿವಿಧ ಗ್ರಾಮಗಳ ನೂರಾರು ಜನ ರೈತರು ಇಂಡಿ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ತಹಶೀಲ್ದಾರ ಬಿ.ಎಸ್.ಕಡಕಬಾವಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಜೆಡಿಎಸ್ ಮುಖಂಡ ಬಿ. ಡಿ. ಪಾಟೀಲ ಹಾಗೂ ರೈತ ಮುಖಂಡ ಕೃಷ್ಣ ಜಾಗೀರದಾರ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ಕುಡಿಯುವ ನೀರಿಗಾಗಿ ಸೋಲಾಪುರ ಮತ್ತು ಅಕ್ಕಲಕೋಟ ನಗರಗಳ ಜನರಿಗೆ ಕುಡಿಯುವ ನೀರಿಗಾಗಿ ಉಜಿನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದೆ. ಆದರೆ ಇಂಡಿ ತಾಲ್ಲೂಕಿನ ಭೀಮಾನದಿ ದಡದಲ್ಲಿ ಬರುವ ಅಗರಖೇಡ, ಭುಯ್ಯಾರ, ನಾಗರಹಳ್ಳಿ, ಖೇಡಗಿ,ರೋಡಗಿ ಮುಂತಾದ ಗ್ರಾಮಗಳವರೆಗೆ ಆ ನೀರು ಬರುತ್ತಿಲ್ಲ. ಇದರಿಂದ ಈ ಎಲ್ಲಾ ಗ್ರಾಮಗಳ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದರು.

ಈ ಬಗ್ಗೆ ಇಂಡಿ ತಹಶೀಲ್ದಾರ್ ಬಿ.ಎಸ್.ಕಡಕಬಾವಿ ಅವರಿಗೆ ನೂರಾರು ರೈತರ ಮುಖಾಂತರ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಮಾತನಾಡಿ, ಜಿಲ್ಲಾಧಿಕಾರಿಗಳು ಹಾಗೂ ಕೆಬಿಜೆಎನ್ ಎಲ್ ಅಧಿಕಾರಿಗಳ ಜೊತೆ ಚರ್ಚಿಸಿ, ನೀರು ಬಿಡಿಸುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಗಂಗಾಧರ ತಳವಾರ, ಪ್ರಭು.ಗೋಳಸಾರ, ಶ್ರೀನಾಥ್ ಹೊಸಮನಿ, ಶಿವಯೋಗಿ ಪೂಜಾರಿ, ಹಣಮಂತ ತಳವಾರ, ಶಶಿಧರ ಮಠ, ಚಿದಾನಂದ ಆಳೂರ, ಗುರು ಅಜಗೊಂಡ, ಬಾಬು ಚಿಕ್ಕಮಣ್ಣೂರ, ಸಂಗಮೇಶ ಚಿಕ್ಕಮಣೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-466196813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.