ಇಂಡಿ: ವಿಶ್ವಕರ್ಮ ಸಮಾಜ ಕುಶಲಕರ್ಮಿ ಸಮುದಾಯಗಳಲ್ಲಿ ಒಂದಾಗಿದ್ದು, ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಲೋಹದ ಕೆಲಸಗಳಲ್ಲಿ ಪರಿಣಿತರಿದ್ದು, ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವ, ಉಚಿತ ಸಾಮೂಹಿಕ ಉಪನಯನ ಹಾಗೂ ನೂತನ ರಥೋತ್ಸವದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಕಾಳಿಕಾ ದೇವಸ್ಥಾನಕ್ಕೆ ಒಂದು ವ್ಯವಸ್ಥಿತ ರಸ್ತೆ , ದೇವಸ್ಥಾನ ಸುತ್ತ ವಿದ್ಯುತ್ ವ್ಯವಸ್ಥೆ ಮತ್ತು ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.

ಕಲಬುರಗಿಯ ಪ್ರಣಯ ನಿರಂಜನ ಶ್ರೀ ಮಾತನಾಡಿ, ವಿಶ್ವಕರ್ಮ ಸಮಾಜ ಮಾನವನ ಜೀವನದ ಪ್ರತಿಯೊಂದು ಹಂತದಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ತಿಳಿಸಿದರು.

ಕನ್ನೂರ ಪ್ರಕಾಶ ಶ್ರೀಗಳು ಮಾತನಾಡಿದರು. ಪುರಾಣ ಮಹಾಮಂಗಲ, ಉಡಿ ತುಂಬುವ ಕಾರ್ಯಕ್ರಮ, ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆದವು. ಮುರನಾಳದ ಶ್ರೀ ಜಗನ್ನಾಥ ಶ್ರೀಗಳು, ಬೌರಮ್ಮ ಕಣ್ಣಿ ಇದ್ದರು.

ಶ್ರೀಕಾಳಿಕಾ ಸೇವಾ ಭೂಷಣ ಪ್ರಶಸ್ತಿ ಸಮಾರಂಭವನ್ನು ಅಗರಖೇಡದ ಪ್ರಭುಲಿಂಗೇಶ್ವರ ಶ್ರೀ, ಹಿಕ್ಕಣಗುತ್ತಿ ಪ್ರಭುಲಿಂಗ ಶ್ರೀ, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ನಡೆಸಿಕೊಟ್ಟರು.

ಶಾಸಕ ಯಶವಂತರಾಯಗೌಡ ಪಾಟೀಲ, ಭಾಗ್ಯಶ್ರೀ ಯಶವಂತರಾಯಗೌಡ ಪಾಟೀಲ ಹಾಗೂ ಡಾ. ಪವಿತ್ರಾ ಬೆಂಗಳೂರು ಅವರಿಂದ ರಥದಉದ್ಘಾಟನೆ ಮಾಡಿ ಚಾಲನೆ ನೀಡಲಾಯಿತು. ರಥದ ಪೂಜೆಯನ್ನು ಬೌರಮ್ಮ ಬಸವರಾಜ ಕಣ್ಣಿ ನೆರವೇರಿಸಿದರು.

ದತ್ತಾತ್ರೆಯ ಸುತಾರ, ನರಸಿಂಹ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ ಮಾತನಾಡಿದರು. ಭೀಮರಾವ ಬಡಿಗೇರ, ಶಿವಾನಂದ ಬಡಿಗೇರ, ಸುಜಿತ ಲಾಳಸಂಗಿ, ರಮೇಶ ಪೋದ್ದಾರ, ಶಂಕರ ಕಮ್ಮಾರ, ಮೋನಮ್ಮ ಬಡಿಗೇರ ಶ್ರೀಮತಿ ಜಯಶ್ರೀ ಪತ್ತಾರ, ವಿಠ್ಠಲಾಚಾರ್ಯ ಕಾಳಿಕಾ ದೇವಸ್ಥಾನದ ಅರ್ಚಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-26-519700813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.