ವಿಜಯಪುರ: ಶಾಲೆಯಲ್ಲಿರುವ ಮಕ್ಕಳ ಆಧಾರ ತಿದ್ದುಪಡಿ (ಶಾಲಾ ದಾಖಲಾತಿಯಂತೆ)ಯನ್ನು ಹಾಗೂ 5ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷ ಪೂರೈಸಿದ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ಸ್ ಅಪಡೇಟ್ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವುದರಲ್ಲಿ ಹತ್ತಿರದ ಆಧಾರ್ ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 5 ರಿಂದ 18 ವರ್ಷದ ಮಕ್ಕಳ ಒಟ್ಟು 6,80,531 ಆಧಾರ ಸೃಜನೆಯಾಗಿದ್ದು, ಅದರಲ್ಲಿ 5 ರಿಂದ 7 ವರ್ಷದ 1,19,978 ಹಾಗೂ 15 ರಿಂದ 17 ವರ್ಷದ ಮಕ್ಕಳ 36,250 ಒಟ್ಟು 1,56,228 ಕಡ್ಡಾಯ ಬಯೋಮೆಟ್ರಿಕ್ಸ್ ಅಪಡೇಟ್ಗೆ ಬಾಕಿ ಇರುವುದರಿಂದ ಪಾಲಕರು ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಡ್ಡಾಯ ಬಯೋಮೆಟ್ರಿಕ್ಸ್ ಅಪಡೇಟ್ ಮಾಡಿಕೊಳ್ಳಬಹುದಾಗಿದೆ.

10 ವರ್ಷಗಳ ಹಿಂದೆ ಆಧಾರ್ ಸೃಜಿಸಲಾದ ನಾಗರಿಕರು ತಮ್ಮ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಕಾಲೋಚಿತಗೊಳಿಸಲು ಯುಐಡಿಎಐ ಹೊಸದಾಗಿ ಪರಿಚಯಿಸಿದ ಪಿಓಐ,ಪಿಓಎ ಅಪಡೇಟ್ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 13,603 ಆಧಾರ್ ಸಂಖ್ಯೆಗಳ ಮೊಬೈಲ್ ನಂಬರ್ ಕಾಲೋಚಿತಗೊಳಿಸಲು ಬಾಕಿ ಇವೆ. ಈ ಸೇವೆಯನ್ನು ಸಾರ್ವಜನಿಕರು ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.