ಬುಧವಾರ, ಸೆಪ್ಟೆಂಬರ್ 30, 2020
26 °C

ಇಂಡಿ: ರಾಯಣ್ಣ, ಚನ್ನಮ್ಮ ಚಿತ್ರಗಳಿಗೆ ಅವಮಾನ; ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಂಡಿ: ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಕನಕದಾಸರ ಚಿತ್ರಗಳಿಗೆ ಕೆಸರು ಮೆತ್ತಿ ಅವಮಾನಿಸಿದ್ದು, ಕೂಡಲೇ ಅವರನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಜಾರಿಗೊಳಿಸಬೇಕು ಎಂದು ತಾಲ್ಲೂಕು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಅಭಿಮಾನಿ ಬಳಗ ಮಂಗಳವಾರ ಒತ್ತಾಯಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನೆ ಮಾಡಿ, ಮಿನಿವಿಧಾನ ಸೌಧ ಎದುರು ಘೋಷಣೆಗಳನ್ನು ಕೂಗಿ ಉಪ ತಹಶೀಲ್ದಾರ್‌ ಎಸ್.ಆರ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಪಂಚಮಸಾಲಿ ಸಮಾಜ ಮುಖಂಡ ಸೋಮು ದೇವರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ. ಪಾಟೀಲ, ಮಂಜುನಾಥ ಕಾಮಗೊಂಡ, ಮಹಿಬೂಬ ಬೇನೂರ, ರೇವಣಸಿದ್ದಪ್ಪ ಗೋಡಕೆ, ಮಾಳು ಮ್ಯಾಕೇರಿ, ಸಿದ್ದು ಡಂಗಾ, ಶ್ರೀಶೈಲ ಪೂಜಾರಿ, ವಿಠ್ಠಲ ಹಳ್ಳಿ, ಸಾಹೇಬಗೌಡ ಪಾಟೀಲ, ನಾನಾಗೌಡ ಪಾಟೀಲ, ದೇವೇಂದ್ರ ಕುಂಬಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು