ಇಂಡಿ: ಕೃಷಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆದರೆ ಹೆಚ್ಚಿನ ಆದಾಯ ಗಳಿಸಿಕೊಳ್ಳಬಹುದು ಎಂದು ಇಂಡಿ ಸಮೀಪದ ಕೆಸರಾಳ ತಾಂಡಾದ ರೈತ ನಾಮದೇವ ರಾಠೋಡ ತೋರಿಸಿಕೊಟ್ಟಿದ್ದಾರೆ.

ಅವರು ತಮ್ಮ 8 ಎಕರೆ ಜಮೀನಿನ ಪೈಕಿ 1.5 ಎಕರೆ ಜಮೀನಿನಲ್ಲಿ 150 ನಿಂಬೆ ಗಿಡಗಳು, 1 ಎಕರೆ ಜಮೀನಿನಲ್ಲಿ 30 ಆಫೂಸ್ ಮಾವಿನ ಗಿಡ, 25 ತೆಂಗಿನ ಗಿಡಗಳು, 30 ಚಿಕ್ಕು, 35 ಡ್ರ್ಯಾಗನ್ ಹಣ್ಣು ಬೆಳೆದಿದ್ದಾರೆ. ಈ ಎಲ್ಲಾ ಹಣ್ಣುಗಳು ಕಟಾವಿಗೆ ಬಂದಿದ್ದು, ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಇನ್ನುಳಿದ ಜಮೀನಿನಲ್ಲಿ 2 ಎಕರೆ ಜಮೀನಿಗೆ ಡ್ರಿಪ್ ಅಳವಡಿಸಿ ಕಬ್ಬು ನಾಟಿ ಮಾಡಿದ್ದಾರೆ.

ಇವರಿಗೆ ರತಿಕಾಂತ ಮತ್ತು ರಾಜಕುಮಾರ ಎನ್ನುವ ಇಬ್ಬರು ಮಕ್ಕಳಿದ್ದು, ವಯಸ್ಸಿಗೆ ಬಂದಿದ್ದಾರೆ. ಇವರ ಭವಿಷ್ಯಕ್ಕೆಂದು ಆಲಮಟ್ಟಿಯ ಸಸಿ ಉದ್ಯಾನದಿಂದ ಖರೀದಿಸಿದ ಶ್ರೀಗಂಧದ ಸಸಿಗಳನ್ನು ಜಮೀನಿನ ಬದುವಿನಲ್ಲಿಯೇ 101 (ಚಂದನ್) ನೆಟ್ಟು ಬೆಳೆಸಿದ್ದಾರೆ. ಈಗ ಅವುಗಳಿಗೆ 3 ವರ್ಷವಾಗಿದ್ದು, ಹುಲುಸಾಗಿ ಬೆಳೆದಿವೆ. ಇನ್ನು 13 ವರ್ಷ ಕಳೆದರೆ ಅವು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳಾಗಿ ಒಳ್ಳೆಯ ಆದಾಯ ಕೊಡುತ್ತವೆ ಎನ್ನುತ್ತಾರೆ ನಾಮದೇವ ರಾಠೋಡ.

ಇವೆಲ್ಲಾ ಬೆಳೆಗಳಿಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ 100* 100 ಅಡಿ ಅಳತೆಯ ಹಾಗೂ 10 ಅಡಿ ಆಳದ ಹೊಂಡ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಸರ್ಕಾರದಿಂದ ₹ 1.80 ಲಕ್ಷ ಅನುದಾನ ಪಡೆದುಕೊಂಡಿದ್ದು, ಕೃಷಿಗೆ ಹೆಚ್ಚಿನ ಅನುಕೂಲವಾಗಿದೆ. ಅವರ ಜಮೀನು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯ ಕೆಳಗಡೆ ಇದ್ದು, ಎರಡು ಕೊಳವೇ ಬಾವಿ ಕೊರೆಯಿಸಿದ್ದಾರೆ. ಎರಡರಲ್ಲಿಯೂ ನೀರಿದ್ದು, ಕೃಷಿ ಹೊಂಡಕ್ಕೆ ನೀರು ಸಂಗ್ರಹಿಸುತ್ತಾರೆ. ಹೊಂಡಕ್ಕೆ ಪಂಪ್ಸೆಟ್ ಜೋಡಿಸಿ ಜಮೀನಿನಲ್ಲಿಯ ಎಲ್ಲಾ ಬೆಳೆಗಳಿಗೆ ನೀರುಣಿಸುತ್ತಾರೆ.

ಹಣ್ಣಿನ ಬೆಳೆಗಳಲ್ಲದೇ ಬಿಳಿ ಜೋಳ, ಗೋಧಿ, ಕಡಲೆ, ಶೇಂಗಾ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.
ನಾಮದೇವ ರಾಠೋಡ ಅವರು ಕೃಷಿಗೆ ರಸಾಯನಿಕ ಗೊಬ್ಬರ ಉಪಯೋಗಿಸಿದರೆ ಮಣ್ಣಿನ ಫಲವತ್ತತೆ ಕೆಡುತ್ತದೆ ಎಂದು ಅರಿತು ತಮ್ಮ ಜಮೀನಿನಲ್ಲಿಯೇ 4 ಆಕಳುಗಳು, 16 ಕುರಿಗಳು, 2 ಎಮ್ಮೆಗಳು, 50 ಕೋಳಿಗಳನ್ನು ಸಾಕಿದ್ದಾರೆ. ಇವೆಲ್ಲವುಗಳಿಂದ ಜಮೀನಿಗೆ ಸಾಕಾಗುವಷ್ಟು ಗೊಬ್ಬರ, ಹಾಲು, ತತ್ತಿ ಸಂಪಾದನೆ ಮಾಡುತ್ತಾರೆ. ಹಾಲು ಮತ್ತು ತತ್ತಿಯಿಂದಲೇ ಮನೆಯ ಖರ್ಚು ವೆಚ್ಚ ನಿಭಾಯಿಸುತ್ತಾರೆ.

ಇದೀಗ ಜಮೀನಿನಲ್ಲಿ ಅಫೂಸ್ ಮಾವಿನ ಹಣ್ಣು, ಚಿಕ್ಕು ಮತ್ತು ತೆಂಗು ಕಟಾವಿಗೆ ಬಂದಿದೆ. ಡ್ರ್ಯಾಗಾನ್ ಬೆಳೆ ಮುಂದಿನ ವರ್ಷದಲ್ಲಿ ಕೈಗೆ ಬರುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಎರಡೂ ಮಕ್ಕಳೊಂದಿಗೆ ಜಮೀನಿನಲ್ಲಿ ಚೆನ್ನಾಗಿ ಬೆವರು ಸುರಿಸುವ ಇವರು ‘ಕೃಷಿಯಿಂದ ನಮಗೆ ಒಳ್ಳೆಯ ಆದಾಯವಿದೆ. ಮುಂದಿನ ದಿನಗಳಲ್ಲಿ ಜಮೀನಿನಲ್ಲಿಯೇ ಒಳ್ಳೆಯ ಮನೆ ಕಟ್ಟಿ ಮಕ್ಕಳ ಮದುವೆ ಮಾಡುವ ವಿಚಾರದಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.

ಕೋಟ್
ರೈತರು ಮೊದಲು ದನಕರುಗಳನ್ನು ಮತ್ತು ಕುರಿಗಳನ್ನು ಸಾಕಬೇಕು. ಅವುಗಳಿಂದ ಬರುವ ಗೊಬ್ಬರ ಉಪಯೋಗಿಸಬೇಕು. ಇದರಿಂದ ಮಣ್ಣು ಫಲವತ್ತತೆಯಾಗುತ್ತದೆ. ಆಮೇಲೆ ಕೃಷಿಯಿಂದ ಆದಾಯ ನಿರೀಕ್ಷಿಸಬೇಕು.

ನಾಮದೇವ ರಾಠೋಡ, ರೈತ

ಕೃಷಿ ಬೆಳವಣಿಗೆಗೆ ಶ್ರಮಿಸುವ ರೈತರನ್ನು ಗುರುತಿಸಿ, ಅವರಿಗೆ ಸಲಹೆಗಳನ್ನು ನೀಡಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.