ತಾಳಿಕೋಟೆ: ಗಣೇಶ ನಗರದ ಮಹಾಲಕ್ಷ್ಮಿ ದೇವಸ್ಥಾನ ಸೇವಾ ಸಮಿತಿಯಿಂದ ಮಹಾಲಕ್ಷ್ಮಿಜಾತ್ರಾ ಮಹೋತ್ಸವವು ಆ.11ರಂದು ಜರುಗಲಿದೆ. ತನ್ನಿಮಿತ್ತ ಪ್ರವಚನ ಕಾರ್ಯಕ್ರಮ ಮಂಗಳವಾರದಿಂದ ಆರಂಭಗೊಂಡಿದ್ದು, ಆ.10ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಜರುಗಲಿದೆ.
ಆ.11ರಂದು ಬೆಳಿಗ್ಗೆ 7 ಗಂಟೆಗೆ ಗಂಗಸ್ಥಳ, 8.30 ಕ್ಕೆ ಹೋಮಹವನ, 10ಗಂಟೆಗೆ ಮಹಾಪೂಜೆ 11 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾ ಪ್ರಸಾದ ಜರುಗುವುದು ಎಂದು ಮಹಾಲಕ್ಷ್ಮಿ ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.