ವಿಜಯಪುರ: 2012ರಲ್ಲಿ ಕೆಎಸ್ಆರ್ಟಿಸಿ ‘ಡಿ’ ದರ್ಜೆ ನೇಮಕಾತಿ ವೇಳೆ ಖೊಟ್ಟಿ ಅಂಕಪಟ್ಟಿ ಸಲ್ಲಿಸಿ, ವಂಚಿಸಿ ನೌಕರಿಗೆ ಆಯ್ಕೆಯಾದ ಆರೋಪಿ, ಬಬಲೇಶ್ವರ ತಾಲ್ಲೂಕಿನ ಮಮದಾಪುರದ ಸಿದ್ದಪ್ಪ ಕೊಳ್ಳೊಳ್ಳಿ ಪಾತ್ರೋಟಗೆ ವಿಜಯಪುರ ಎರಡನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಎರಡು ವರ್ಷ ಸಾದಾ ಶಿಕ್ಷೆ ಮತ್ತು ₹4 ಸಾವಿರ ದಂಡ ವಿಧಿಸಿದೆ.

ಈ ಪ್ರಕರಣದಲ್ಲಿ ಮುಖ್ಯ ಆರೋಪಿಗೆ ಸಹಕರಿಸಿದ ಇನ್ನೊಬ್ಬ ಆರೋಪಿ ಎಲ್.ಪಿ.ಚವ್ಹಾಣಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿದೆ.

7ನೇ ತರಗತಿಯಲ್ಲಿ ಮುಖ್ಯ ಆರೋಪಿಯು ಪಡೆದ 270 ಅಂಕಗಳ ಬದಲಾಗಿ 589 ಅಂಕಗಳನ್ನು ಪಡೆದಿರುವುದಾಗಿ ಖೊಟ್ಟಿ ಅಂಕಪಟ್ಟಿಯನ್ನು ಪಡೆದು, ಡಿ. ದರ್ಜೆ ನೌಕರಿಗೆ ಆಯ್ಕೆಯಾಗಿದ್ದು, ದಾಖಲಾತಿಗಳ ಪರಿಶೀಲನೆ ವೇಳೆ ಸಹಿ ಕೂಡ ಮಾಡಿರುತ್ತಾನೆ.

ಶಾಲಾ ದಾಖಲಾತಿಯಲ್ಲಿ ಅಂಕಗಳನ್ನು ತಿದ್ದುಪಡಿ ಮಾಡುವಲ್ಲಿ ಎರಡನೇ ಆರೋಪಿಯು ಸಹಕರಿಸುತ್ತಾನೆ. ಈ ಕುರಿತು ತನಿಖೆ ನಡೆಸಿದ ಬಬಲೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ರಮೇಶ ಅವಜಿ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಸಂಪತ್ತಕುಮಾರ್ ಪ್ರಹ್ಲಾದ ಬಳೋಲಗಿಡದ ಅವರು ಸಾಕ್ಷಾಧಾರಗಳನ್ನು ಪರಿಶೀಲಿಸಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎಸ್.ವಿ.ರಾಠೋಡ ಮತ್ತು ಎಂ.ಎನ್. ಪಾಟೀಲ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.