ವಿಜಯಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಧಿಸೂಚನೆ ಹೊರಡಿಸಿದ್ದು, ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಹತ್ತಿ (ನೀರಾವರಿ) ನೆಲಗಡಲೆ, ಸಜ್ಜೆ, ಸೂರ್ಯಕಾಂತಿ ಬೆಳೆಗಳಿಗೆ ಬೆಳೆ ವಿಮೆ ಕಟ್ಟಲು ಜುಲೈ 31ಕೊನೆಯ ದಿನವಾಗಿದೆ.
ರೈತರು ಕೊನೆಯ ದಿನದವರೆಗೆ ಕಾಯದೇ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕಿ ಎಲ್. ರೂಪಾ ತಿಳಿಸಿದ್ದಾರೆ. ಮುಂಗಾರು 2023ರ ಬೆಳೆ ವಿಮೆ ಮಾಡಿಸುವಾಗ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಲು ಹಾಗೂ ಬೆಳೆ ವಿಮೆ ನೋಂದಣಿ ಮಾಡಿಸುವಾಗ ವಾರಸುದಾರರ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ಬೆಳೆ ವಿಮೆ ಮಾಡಿಸುವ ರೈತರು ಕಡ್ಡಾಯವಾಗಿ ಎಫ್.ಐ.ಡಿ.ಯನ್ನು ಹೊಂದಿರಬೇಕು. ಇಲ್ಲದಿದ್ದಲ್ಲಿ ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ ಎಫ್.ಐ.ಡಿ. ಮಾಡಿಸಿಕೊಳ್ಳಬೇಕು.
ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ್ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ್ ಬುಕ್, ಮತ್ತು ಆಧಾರದ ಸಂಖ್ಯೆಯೊಂದಿಗೆ ಡಿಸಿಸಿ/ಇತರ ಬ್ಯಾಂಕ್, ಗ್ರಾಮ ಒನ್ ಮತ್ತು ಸಿ.ಎಸ್.ಸಿ. ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಪ್ರಸಕ್ತ ಮುಂಗಾರು ಹಂಗಾಮಿಗೆ ಅಗ್ರಿಕಲ್ಚರ್ ಇನ್ಷುರೆನ್ಸ್ ಕಂಪನಿ ನೋಡಲ್ ಏಜೆನ್ಸಿಯಾಗಿದೆ. ಏಜೆನ್ಸಿ ಪ್ರತಿನಿಧಿಗಳಾದ ವಿಜಯಪುರ- ಬಂದವ್ವ ತೇಲಿ ಮೊ:9740913027, ಬಬಲೇಶ್ವರ-ಆರೀಫ್ ಅತ್ತಾರ ಮೊ:8147581959, ಬಸವನಬಾಗೇವಾಡಿ-ಪ್ರಶಾಂತ ವಾಡೇಕರ ಮೊ:8867379036, ಮುದ್ದೇಬಿಹಾಳ-ರಾಮನಗೌಡ ಬಿರಾದಾರ ಮೊ:9036686093, ತಿಕೋಟಾ-ಸತೀಶ ರಾಠೋಡ ಮೊ: 9880284611, ಚಡಚಣ-ವಿಜಯ ಮೊ: 7026412128, ತಾಳಿಕೋಟೆ-ಶ್ರೀಶೈಲ ಸಾರವಾಡ ಮೊ: 8073381112 ಹಾಗೂ ಶ್ವೇತಾ ಮೊ: 9972038053 ಇವರನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.