ತಿಕೋಟಾ: ಕರ್ನಾಟಕದಲ್ಲಿ 2026ರ ಏಪ್ರಿಲ್ 16ರಿಂದ ಮೇ 15ರ ವರೆಗೆ ಮನೆಪಟ್ಟಿ ಮತ್ತು ವಸತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಮೊದಲ ಮೂರು ದಿನ ಗ್ರಾಮದ ನಕ್ಷೆಯ ಜೊತೆಗೆ ಗಣತಿದಾರರಿಗೆ ಬಂದಂತಹ ಪ್ರದೇಶದಲ್ಲಿ ಲಭ್ಯವಿರುವ ಮನೆಗಳ, ರಸ್ತೆ, ಹಳ್ಳ, ಕೆರೆ, ಸಮುದಾಯ ಭವನ, ದೇವಸ್ಥಾನ ಸೇರಿದಂತೆ ಮನೆಪಟ್ಟಿ ತಯಾರಿಸಲು ಶಿಕ್ಷಕರು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತಾಲ್ಲೂಕಿನ ಘೋಣಸಗಿ ಗ್ರಾಮ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಬಿರು ಬಿಸಿಲಿನ ನಡುವೆಯೂ ರಜೆ ದಿನಗಳಲ್ಲಿ ಶಿಕ್ಷಕರು ಜನಗಣತಿ ಕಾರ್ಯ ಮಾಡುತ್ತಿದ್ದಾರೆ. ಆರಂಭದಲ್ಲಿ ಹಲವು ಶಿಕ್ಷಕರ ಮೊಬೈಲ್ ಲಾಗಿನ್ನಲ್ಲಿ ತೊಂದರೆಯಾಗುತ್ತಿದೆ. ತಮಗೆ ವಹಿಸಿದ ನಕ್ಷೆ ಡೌನ್ಲೋಡ್ ಆಗುತ್ತಿಲ್ಲ ಎಂದು ಶಿಕ್ಷಕರು ಮೇಲ್ವಿಚಾರಕರ ಗಮನಕ್ಕೆ ತಂದರು.

ಮೇಲ್ವಿಚಾರಕ ಐ.ಎ.ತೇಲಿ, ಗಣತಿದಾರ ಎಂ.ಎನ್.ಮದಬಾವಿ, ಸಾವಿತ್ರಿ ಆಕಳೆ, ನಾರಾಯಣ ಜಗತಾಪ, ಪಿ.ಎಸ್.ಗದ್ಯಾಳ, ಬಿಎಲ್ಓ ರಾಜು ಹುನ್ನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-26-9009109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.